ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಎಸ್‍ಯುವಿ; 9 ವಿದ್ಯಾರ್ಥಿಗಳು ಸಾವು

7

ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಎಸ್‍ಯುವಿ; 9 ವಿದ್ಯಾರ್ಥಿಗಳು ಸಾವು

Published:
Updated:
ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಎಸ್‍ಯುವಿ; 9 ವಿದ್ಯಾರ್ಥಿಗಳು ಸಾವು

ಮುಜಾಫರ್‍ ಪುರ್: ಬಿಹಾರದ ಮುಜಾಫರ್‍‍ಪುರ್ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಶಾಲಾ ಮಕ್ಕಳು ರಸ್ತೆ ದಾಟುತ್ತಿದ್ದಾಗ ರಭಸದಿಂದ ಬಂದ ಎಸ್‍ಯುವಿ ಡಿಕ್ಕಿ ಹೊಡೆದ ಪರಿಣಾಮ 9 ವಿದ್ಯಾರ್ಥಿಗಳು ಸಾವಿಗೀಡಾದ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 77ರಲ್ಲಿ ಈ  ಘಟನೆ ನಡೆದಿದೆ. ಸಾವಿಗೀಡಾದ ಮಕ್ಕಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ರಸ್ತೆಯಲ್ಲಿ ಮಕ್ಕಳ ಛಿದ್ರವಾದ ದೇಹ ಬಿದ್ದಿದ್ದು, ರಕ್ತ ಹರಿಯುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇಲ್ಲಿಯವರೆಗೆ 9 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಪೂರ್ವ ಮುಜಾಫರ್‍‍ಪುರ್ ಡೆಪ್ಯುಟಿ ಪೊಲೀಸ್ ಸುಪರಿಟೆಂಡೆಂಟ್ ಗೌರವ್ ಪಾಂಡೆ ಹೇಳಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಶ್ರೀಕೃಷ್ಣ ಮೆಮೊರಿಯಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್  (ಎಸ್‍ಕೆಎಂಸಿಎಚ್ ) ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದ್ದು ಬೊಲೆರೊ ಎಸ್‍ಯುವಿ ಚಲಾಯಿಸುತ್ತಿದ್ದ ವ್ಯಕ್ತಿ ಅಪಘಾತ ಸಂಭವಿಸಿದ ಕೂಡಲೇ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪಾಂಡೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry