2018ರಲ್ಲಿ ‘ಸುಪ್ರೀಂ’ನ 7 ನ್ಯಾಯಮೂರ್ತಿಗಳ ನಿವೃತ್ತಿ

7

2018ರಲ್ಲಿ ‘ಸುಪ್ರೀಂ’ನ 7 ನ್ಯಾಯಮೂರ್ತಿಗಳ ನಿವೃತ್ತಿ

Published:
Updated:

ನವದೆಹಲಿ: ಸುಪ್ರೀಂ ಕೋರ್ಟ್‌ನ ಏಳು ಮಂದಿ ನ್ಯಾಯಮೂರ್ತಿಗಳು ಈ ವರ್ಷ ನಿವೃತ್ತರಾಗಲಿದ್ದಾರೆ.

ಮಾರ್ಚ್‌ 1ರಂದು ನ್ಯಾಯಮೂರ್ತಿ ಅಮಿತಾವ ರಾಯ್‌ ಹಾಗೂ ಮೇ 4ರಂದು ನ್ಯಾಯಮೂರ್ತಿ ರಾಜೇಶ್‌ ಅಗರ್‌ವಾಲ್‌ ಅವರು ನಿವೃತ್ತರಾಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹಾಗೂ ಕಾನೂನು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಜೂನ್‌ 22ರಂದು ಹಿರಿಯ ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ಹಾಗೂ ಜುಲೈ 6ರಂದು ನ್ಯಾಯಮೂರ್ತಿ ಆದರ್ಶ್‌ ಗೋಯಲ್‌ ನಿವೃತ್ತರಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಅಕ್ಟೋಬರ್‌ 2ರಂದು, ನ್ಯಾಯಮೂರ್ತಿಗಳಾದ ಕುರಿಯನ್‌ ಜೋಸೆಫ್‌ ನವೆಂಬರ್‌ 29ರಂದು ಹಾಗೂ ಮದನ್‌ ಬಿ. ಲೋಕೂರ್‌ ಡಿಸೆಂಬರ್‌ 30ರಂದು ನಿವೃತ್ತರಾಗಲಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry