ತೀರ್ಪುಗಾರನ ಸ್ಥಾನದಿಂದ ಹೊರಗುಳಿದ ಪಪೊನ್‌

7

ತೀರ್ಪುಗಾರನ ಸ್ಥಾನದಿಂದ ಹೊರಗುಳಿದ ಪಪೊನ್‌

Published:
Updated:
ತೀರ್ಪುಗಾರನ ಸ್ಥಾನದಿಂದ ಹೊರಗುಳಿದ ಪಪೊನ್‌

ಮುಂಬೈ: ರಿಯಾಲಿಟಿ ಶೋದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮುತ್ತು ನೀಡಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಕ್ರಮದ ತೀರ್ಪುಗಾರನ ಸ್ಥಾನದಿಂದ ಗಾಯಕ ಅನುರಾಗ್‌ ಪಪೊನ್‌ ಕೆಳಗಿಳಿದಿದ್ದಾರೆ.

‘ಈ ವಿಚಾರದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ, ಎಂದಿಗೂ ಅನುಚಿತವಾಗಿ ವರ್ತಿಸಿಲ್ಲ’ ಎಂದು ಶುಕ್ರವಾರ ಅವರು ಹೇಳಿದ್ದರು. ಇದಾದ ಮರುದಿನವೇ ತೀರ್ಪುಗಾರರ ಸ್ಥಾನದಿಂದ ಕೆಳಗಿಳಿಯುವುದಾಗಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ನನ್ನ ವೃತ್ತಿಗೆ ನ್ಯಾಯ ಸಲ್ಲಿಸುವ ಉದ್ದೇಶದಿಂದ ರಿಯಾಲಿಟಿ ಶೋ ತೀರ್ಪುಗಾರನ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಈ ವಿಷಯದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದ್ದು, ಈ ವಿಚಾರದ ಬಗ್ಗೆ ತನಿಖೆ ನಡೆಯಲಿ. ವಿವಾದ ಬಗೆಹರಿಯುವವರೆಗೆ ಕಾರ್ಯಕ್ರಮದಿಂದ ದೂರವುಳಿಯುತ್ತೇನೆ’ ಎಂದು ಶನಿವಾರ ಟ್ವೀಟ್‌ ಮಾಡಿದ್ದಾರೆ.

ಅಸ್ಸಾಂ ಪೊಲೀಸರು ಪಪೊನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅಸ್ಸಾಂ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ಗುವಾಹಟಿ ಪೊಲೀಸ್ಆ‌ ಯುಕ್ತರಲ್ಲಿ  ದೂರು ದಾಖಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry