ಮಗಳ ಮೇಲೆ ಅತ್ಯಾಚಾರ: ವ್ಯಕ್ತಿಗೆ ಜೀವಾವಧಿ ಶಿಕ್ಷೆ

7

ಮಗಳ ಮೇಲೆ ಅತ್ಯಾಚಾರ: ವ್ಯಕ್ತಿಗೆ ಜೀವಾವಧಿ ಶಿಕ್ಷೆ

Published:
Updated:

ಪಾಲ್ಘಾರ್‌, ಮಹಾರಾಷ್ಟ್ರ: ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಎರಡು ಬಾರಿ ಗರ್ಭಿಣಿಯಾಗಿಸಿದ 38 ವರ್ಷದ ತಂದೆಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಸ್ಕೊ) ಹಾಗೂ ಅತ್ಯಾಚಾರ ಪ್ರಕರಣದ ಅಡಿ ಜಿಲ್ಲಾ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.

‘ಮೂರು ವರ್ಷಗಳ ಹಿಂದೆ ಅಫರಾಧಿಯು ತನ್ನ 12ರಿಂದ 16 ವರ್ಷದೊಳಗಿನ ಮಗಳ ಮೇಲೆ ಕೋಲ್ಕತ್ತದಲ್ಲಿ ಅತ್ಯಾಚಾರ ಎಸಗಿದ್ದ’ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

‘ಅನಂತರ ಬಲವಂತವಾಗಿ ಮುಂಬೈಗೆ ಕರೆತಂದು ಅಲ್ಲಿಯೂ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ಬಾಲಕಿಯು ಎರಡು ಮಕ್ಕಳಿಗೆ ಜನ್ಮ ನೀಡಿದ್ದು, ಒಂದು ಮಗು ಜನಿಸಿದ ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು’ ಎಂದು ಹೇಳಿದ್ದಾರೆ.

‘ಬಾಲಕಿಯ ದೂರಿನ ಮೇರೆಗೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಡಿಎನ್‌ಎ ಪರೀಕ್ಷೆಯಲ್ಲೂ ಮಕ್ಕಳು ಆತನದ್ದೆಂಬುದು ದೃಢಪಟ್ಟಿತ್ತು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry