ಅಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ವಿಟ್ಜರ್ಲೆಂಡ್‌ಗೆ ಚಿನ್ನ

7
ಚಳಿಗಾಲದ ಒಲಿಂಪಿಕ್ಸ್‌; ಮೊದಲ ಪದಕ ಗೆದ್ದ ಜಪಾನ್‌

ಅಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ವಿಟ್ಜರ್ಲೆಂಡ್‌ಗೆ ಚಿನ್ನ

Published:
Updated:
ಅಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ವಿಟ್ಜರ್ಲೆಂಡ್‌ಗೆ ಚಿನ್ನ

ಗಾಂಗ್ ನುವಾಂಗ್‌ : ವೆಂಡಿ ಹೋಲ್ಡನರ್‌ ಮುಂದಾಳತ್ವದ ಸ್ವಿಟ್ಜರ್ಲೆಂಡ್‌ ತಂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡಿರುವ ಅಲ್ಪೈನ್ ಸ್ಕೀಯಿಂಗ್‌ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದೆ.

ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್‌ 3–1ರಲ್ಲಿ ಆಸ್ಟ್ರಿಯಾ ತಂಡದ ಎದುರು ಗೆದ್ದಿತು. ಈ ತಂಡದ ಹೋಲ್ಡನರ್‌ ಈಗಾಗಲೇ ಸ್ಲಲೊಮ್ ವಿಭಾಗದಲ್ಲಿ ಬೆಳ್ಳಿ, ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ.

ನಾರ್ವೆ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಒಟ್ಟು 38 ಪದಕಗಳನ್ನು ಜಯಿಸಿದ ಈ ತಂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪದಕ ಗೆದ್ದ ದಾಖಲೆ ನಿರ್ಮಿಸಿತು.

ಜಪಾನ್‌ಗೆ ಮೊದಲ ಪದಕ: ಮಹಿಳೆಯರ ಕರ್ಲಿಂಗ್‌ ವಿಭಾಗದಲ್ಲಿ ಶನಿವಾರ ಜಪಾನ್ ತಂಡ ಮೊದಲ ಪದಕ ಗೆದ್ದುಕೊಂಡಿದೆ. ಪ್ಲೇ ಆಫ್‌ ಪಂದ್ಯದಲ್ಲಿ ಬ್ರಿಟನ್‌ ಎದುರು 5–3ರಲ್ಲಿ ಗೆದ್ದು ಕಂಚು ಪಡೆಯಿತು.

ದಕ್ಷಿಣ ಕೊರಿಯಾದ ಲೀ ಸೆವುಂಗ್ ಹೂನ್ ಪುರುಷರ ಸ್ಪೀಡ್ ಸ್ಕೇಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದರು. ಬೆಲ್ಜಿಯಂನ ಬಾರ್ಟ್ ಸ್ವಿಂಗ್ಸ್‌ ಅವರನ್ನು ಲೀ ಹಿಂದಿಕ್ಕಿದರು.

ಸ್ಕೀಯಿಂಗ್ ಸ್ಪರ್ಧಿಗಳಿಗೆ ನೀತಾ ಅಂಬಾನಿ ಪದಕ ಪ್ರದಾನ

ಅಂತರರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆಯ ಸದಸ್ಯರಾಗಿರುವ ನೀತಾ ಅಂಬಾನಿ ಅವರು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡಿರುವ ಅಲ್ಪೈನ್ ಸ್ಕೀಯಿಂಗ್ ತಂಡ ವಿಭಾಗದಲ್ಲಿ ವಿಜೇತರಿಗೆ ಪದಕ ಪ್ರದಾನ ಮಾಡಿದರು.

ಚಿನ್ನ ಗೆದ್ದ ಸ್ವಿಟ್ಜರ್ಲೆಂಡ್ ಹಾಗೂ ಬೆಳ್ಳಿ ಜಯಿಸಿದ ಆಸ್ಟ್ರಿಯಾ ಸ್ಪರ್ಧಿಗಳಿಗೆ ಅವರು ಪದಕ ತೊಡಿಸಿದರು.

ನೀತಾ ಅವರು ಅಂತರರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆಗೆ ಸದಸ್ಯರಾಗಿರುವ ಭಾರತದ ಮೊದಲ ಮಹಿಳೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry