ಜಿ.ಕೆ. ಕಾನೂನು ಕಾಲೇಜಿಗೆ ಸಮಗ್ರ ಪ್ರಶಸ್ತಿ

7
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್‌: ವೀಣಾ, ಲಕ್ಷ್ಮಣ್‌ ಉತ್ತಮ ಅಥ್ಲೀಟ್‌ಗಳು

ಜಿ.ಕೆ. ಕಾನೂನು ಕಾಲೇಜಿಗೆ ಸಮಗ್ರ ಪ್ರಶಸ್ತಿ

Published:
Updated:
ಜಿ.ಕೆ. ಕಾನೂನು ಕಾಲೇಜಿಗೆ ಸಮಗ್ರ ಪ್ರಶಸ್ತಿ

ಧಾರವಾಡ: ಹುಬ್ಬಳ್ಳಿಯ ಗುರುಸಿದ್ದಪ್ಪ ಕೋತಂಬರಿ (ಜಿ.ಕೆ) ಕಾನೂನು ಮಹಾವಿದ್ಯಾಲಯವು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು.

ಎರಡು ದಿನ ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 15 ಕೂಟ ದಾಖಲೆಗಳು ನಿರ್ಮಾಣವಾದವು. ಮೊದಲ ದಿನ ಏಳು ದಾಖಲೆಗಳು ಆಗಿದ್ದವು. ಹೋದ ವರ್ಷದ ಕೂಟದಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದಿತ್ತು.

ಕೆ.ಎಲ್‌.ಇ. ಸಂಸ್ಥೆಯ ಜಿ.ಕೆ. ಕಾಲೇಜು 118 ಪಾಯಿಂಟ್ಸ್ ಕಲೆ ಹಾಕಿ ಅಗ್ರಸ್ಥಾನ ಪಡೆದರೆ, ಮೈಸೂರಿನ ಜೆ.ಎಸ್‌.ಎಸ್‌. ಕಾನೂನು ಮಹಾವಿದ್ಯಾಲಯ 59 ಪಾಯಿಂಟ್ಸ್‌ನಿಂದ ರನ್ನರ್ಸ್‌ ಅಪ್‌ ಆಯಿತು. ಉಡುಪಿ ಜಿಲ್ಲೆಯ ಕುಂಜಿಬೆಟ್ಟಿನ  ವೈಕುಂಠ ಬಾಳಿಗಾ ಕಾಲೇಜು ತಂಡದವರು 48 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನ ಪಡೆದರು.

ವೈಯಕ್ತಿಕ ಪ್ರಶಸ್ತಿ:  ಜಿ.ಕೆ. ಕಾಲೇಜಿನ ವೀಣಾ ಅಡಗಿಮನಿ ಮತ್ತು ಇದೇ ಕಾಲೇಜಿನ ಲಕ್ಷ್ಮಣ್ ಲಮಾಣಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಉತ್ತಮ ಅಥ್ಲೀಟ್‌ ಗೌರವ ಗಳಿಸಿದರು.

ಅಂತರ ವಾರ್ಸಿಟಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವಿಗಳಾದ ವೀಣಾ 100, 200, 400 ಮೀಟರ್‌ ಮತ್ತು  ಲಮಾಣಿ 800, 1500 ಹಾಗೂ 5000 ಮೀಟರ್‌ ಓಟದ ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿದ್ದರು.

ಶನಿವಾರ ಪದಕ ಗೆದ್ದವರು: ಪುರುಷರ ವಿಭಾಗ: 200 ಮೀ. ಓಟ: ಶಂಕರಸಿಂಗ್ ಬಿಸ್ಟ್‌ (ಎಸ್‌.ಎ. ಮಾನ್ವಿ ಕಾಲೇಜು, ಗದಗ ಕಾಲ: 23.11ಸೆ)–1, ಎಮ್ಯಾನುಯೆಲ್‌ (ಬಿಎಂಎಸ್‌ ಕಾಲೇಜು, ಬೆಂಗಳೂರು)–2, ಕೆ. ಕಿರಣ (ಬಾಲಾಜಿ ಕಾಲೇಜು, ಬೆಂಗಳೂರು)–3.

800 ಮೀ. ಓಟ: ಲಮಾಣಿ ಲಕ್ಷ್ಮಣ್‌ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 2ನಿ:05.65.ಸೆ)–1, ಭಕ್ಷೀತ್ ಎಸ್‌.ಎಲ್‌. (ಎಸ್‌.ಎ. ಮಾನ್ವಿ ಕಾಲೇಜು, ಗದಗ)–2, ಶಿವಪ್ರಸಾದ ಎಂ. (ಬಿ.ವಿ. ಬೆಲ್ಲದ ಕಾಲೇಜು, ಬೆಳಗಾವಿ)–3.

ಜಾವಲಿನ್‌ ಎಸೆತ: ಭರತ್‌ ಕುಮಾರ ಹಡಪದ (ಎಸ್‌.ಎ. ಮಾನ್ವಿ ಕಾಲೇಜು, ಗದಗ; 48.70ಮೀ.)–1, ಗುರುರಾಜ ಭಂಡಾರಿ (ಸೇಠ್‌ ಶಂಕರಲಾಲ್‌ ಲಾಹೋಟಿ ಕಾಲೇಜು, ಕಲಬುರ್ಗಿ)–2, ಆರ್. ಅರುಣ (ವಿದ್ಯಾವರ್ಧಕ ಕಾಲೇಜು, ಮೈಸೂರು )–3.

ಟ್ರಿಪಲ್‌ ಜಂಪ್‌: ಅರುಣ ಸವಣೂರ (ಜಿ.ಕೆ. ಕಾಲೇಜು, ಹುಬ್ಬಳ್ಳಿ 12.34 ಮೀ)–1, ಸಂದೀಪ ಎಸ್‌. ಶೆಟ್ಟಿ (ವೈಕುಂಠ ಬಾಳಿಗಾ ಕಾಲೇಜು, ಕುಂಜಿಬೆಟ್ಟು, ಉಡುಪಿ)–2, ಸಿ. ರಾಜೇಶ (ಸರ್ಕಾರಿ ಕಾನೂನು ಕಾಲೇಜು, ಕೋಲಾರ)–3.

4X100 ಮೀ. ರಿಲೆ: ಎಸ್.ಎ. ಮಾನ್ವಿ ಕಾಲೇಜು; ಗದಗ (ಕಾಲ: 47.93ಸೆ)–1, ಶೇಷಾದ್ರಿಪುರಂ ಕಾಲೇಜು, ಬೆಂಗಳೂರು–2, ಬಿಎಂಎಸ್‌ ಕಾಲೇಜು, ಬೆಂಗಳೂರು –3.

4X400 ಮೀ. ರಿಲೆ: ಜಿ.ಕೆ. ಕಾಲೇಜು, ಹುಬ್ಬಳ್ಳಿ (ಕಾಲ: 3ನಿ:44.41ಸೆ.)–1, ಎಸ್‌ಜೆಆರ್ ಕಾಲೇಜು, ಬೆಂಗಳೂರು  –2, ವಿದ್ಯಾವರ್ಧಕ ಕಾಲೇಜು, ಮೈಸೂರು –3.

ಮಹಿಳೆಯರು:

200 ಮೀ. ಓಟ: ವೀಣಾ ಅಡಗಿಮನಿ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 27.25ಸೆ.)–1, ಆರ್‌. ಸುಷ್ಮಿತಾ (ಜೆಎಸ್‌ಎಸ್‌ ಕಾಲೇಜು, ಮೈಸೂರು)–2, ಅಪೂರ್ವ ಮರಾಠೆ (ಆರ್‌.ಎಲ್‌. ಕಾಲೇಜು, ಬೆಳಗಾವಿ)–3.

800 ಮೀ: ಯೋಗಿತಾ ಬಿ. ರಾಜ್‌ (ಜೆಎಸ್‌ಎಸ್‌ ಕಾಲೇಜು, ಮೈಸೂರು; 2ನಿ:55;54ಸೆ.)–1, ತ್ರಿವೇಣಿ ಚುಟ್ಕೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ)–2, ಲವೀನಾ ಡಿಸೋಜಾ (ವಿವೇಕಾನಂದ ಕಾಲೇಜು, ಪುತ್ತೂರು)–3.

5000 ಮೀ. ಓಟ: ತ್ರಿವೇಣಿ ಚುಟ್ಕೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ, 24:59.69ಸೆ.)–1, ಎಸ್‌. ಮಂಜಮ್ಮ (ಸರಸ್ವತಿ ಕಾಲೇಜು, ಚಿತ್ರದುರ್ಗ)–2, ಕೆ.ಎಸ್‌. ಸಂಧ್ಯಾ (ವಿವೇಕಾನಂದ ಕಾಲೇಜು, ಪುತ್ತೂರು)–3.

ಜಾವಲಿನ್ ಎಸೆತ: ಜ್ಯೋತಿ ಪನ್ಸೆ (ಜಿ.ಕೆ. ಕಾಲೇಜು, ಹುಬ್ಬಳ್ಳಿ; 24.33 ಮೀ.)–1, ಸಿ.ಎನ್‌. ರಮ್ಯಾ (ಜೆಎಸ್‌ಎಸ್‌ ಕಾಲೇಜು, ಮೈಸೂರು,)–2, ನಿಶ್ಮಿತಾ (ವೈಕುಂಠ ಬಾಳಿಗಾ ಕಾಲೇಜು, ಕುಂಜಿಬೆಟ್ಟು)–3.

ಟ್ರಿಪಲ್‌ ಜಂಪ್‌: ರವೀನಾ ವಿ.ವಿ. (ಎಸ್‌ಡಿಎಂ ಕಾಲೇಜು, ಮಂಗಳೂರು; 8.47 ಮೀ.)–1, ರಂಜಿತಾ ವಿ.ಕೆ. (ವಿದ್ಯಾವರ್ಧಕ ಕಾಲೇಜು, ಮೈಸೂರು; )2, ಪಿ. ದೀಪಾ ಹಂಡಿ (ಬೆಲ್ಲದ ಕಾಲೇಜು, ಬೆಳಗಾವಿ;)–3.

4X100ಮೀ. ರಿಲೆ: ಜೆಎಸ್‌ಎಸ್‌ ಕಾಲೇಜು, ಮೈಸೂರು (ಕಾಲ: 1:03.91ಸೆ)–1, ವಿವೇಕಾನಂದ ಕಾಲೇಜು, ಪುತ್ತೂರು –2, ಎಸ್‌ಡಿಎಂ ಕಾಲೇಜು, ಮಂಗಳೂರು–3.

4X400 ಮೀ. ರಿಲೆ: ಜಿ.ಕೆ. ಕಾಲೇಜು, ಹುಬ್ಬಳ್ಳಿ (5: 30.81ಸೆ)–1, ವಿದ್ಯಾವರ್ಧಕ ಕಾಲೇಜು, ಮೈಸೂರು –2, ಎಸ್‌.ಸಿ. ನಂದಿಮಠ ಕಾಲೇಜು, ಬಾಗಲಕೋಟೆ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry