ಫುಟ್‌ಬಾಲ್‌: ಬೆಂಗಳೂರು ಈಗಲ್ಸ್ ಚಾಂಪಿಯನ್‌

7

ಫುಟ್‌ಬಾಲ್‌: ಬೆಂಗಳೂರು ಈಗಲ್ಸ್ ಚಾಂಪಿಯನ್‌

Published:
Updated:

ಬೆಂಗಳೂರು: ಅಪೂರ್ವ ಆಟದಿಂದ ಗಮನಸೆಳೆದ ಬೆಂಗಳೂರು ಈಗಲ್ಸ್ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಬಿಡಿಎಫ್‌ಎ ವತಿಯ ‘ಎ’ ಡಿವಿಷನ್ ಲೀಗ್ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಈಗಲ್ಸ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಲೀಗ್ ಹಂತದಲ್ಲಿ ಒಂದೂ ಪಂದ್ಯವನ್ನು ಈ ತಂಡ ಸೋತಿಲ್ಲ. ಈ ಮೂಲಕ 22 ಪಾಯಿಂಟ್ಸ್‌ಗಳಿಂದ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ.

ಶನಿವಾರದ ಪಂದ್ಯದಲ್ಲಿ ಈಗಲ್ಸ್‌ 3–0 ಗೋಲುಗಳಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು.

ಸೂಜಿಕುಮಾರ್‌ (58, 70ನೇ ನಿ.) ಎರಡು ಗೋಲು ದಾಖಲಿಸಿ ಮಿಂಚಿದರು. ಮಣಿವಣ್ಣನ್‌ 48ನೇ ನಿಮಿಷದಲ್ಲಿ ಇನ್ನೊಂದು ಗೋಲು ತಂದಿತ್ತರು.

ಸೂಪರ್ ಡಿವಿಷನ್ ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್‌ 5–2 ಗೋಲುಗಳಿಂದ ಆರ್‌ಡಬ್ಲ್ಯುಎಫ್‌ ಎದುರು ಗೆದ್ದಿದೆ. ವಿಜಯೀ ತಂಡದ ಅಮೋಸ್‌ ಹ್ಯಾಟ್ರಿಕ್ ಗೋಲುಗಳಿಂದ ಗಮನಸೆಳೆದರು. 11, 36, 74ನೇ ನಿಮಿಷಗಳಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು. ಈ ತಂಡದ ಸುನಿಲ್ (28ನೇ ನಿ.), ಸಮರ್ಥ್‌ (33ನೇ ನಿ.) ಗೋಲು ದಾಖಲಿಸಿದರು. ಆರ್‌ಡಬ್ಲ್ಯುಎಫ್ ಪರ ರಾಜೇಶ್‌ (37ನೇ ನಿ.), ನಂದಕುಮಾರ್‌ (85ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಭಾನುವಾರದ ಪಂದ್ಯಗಳಲ್ಲಿ ಇನ್‌ಕಮ್‌ಟ್ಯಾಕ್ಸ್‌ ಎಫ್‌ಸಿ–ಪರಿಕ್ರಮ ಎಫ್‌ಸಿ, ಬಿಎಫ್‌ಸಿ–ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry