ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

353 ಸಂಚಾರ ಸಿಗ್ನಲ್‌ಗಳ ಮೇಲ್ದರ್ಜೆಗೆ ಟೆಂಡರ್‌

Last Updated 24 ಫೆಬ್ರುವರಿ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು: ಬಿ-ಟ್ರ್ಯಾಕ್ ಯೋಜನೆಯಡಿ ನಗರದ 353 ಟ್ರಾಫಿಕ್ ಸಿಗ್ನಲ್‍ಗಳನ್ನು ₹85.34 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ವ್ಯವಸ್ಥೆಗೆ (ವಿಎಎಎಸ್) ಮೇಲ್ದರ್ಜೆಗೆ ಏರಿಸಲು ನಗರ ಸಂಚಾರ ವಿಭಾಗ ಮುಂದಾಗಿದೆ.

ಸಂಚಾರ ಪೊಲೀಸರ ಸಹಾಯವಿಲ್ಲದೆ ಸಂಚಾರ ದಟ್ಟಣೆಗೆ ಅನುಗುಣವಾಗಿ ಸಿಗ್ನಲ್‌ಗಳ ಹಸಿರು ಹಾಗೂ ಕೆಂಪು ದೀಪಗಳನ್ನು ನಿರ್ವಹಿಸುವ ಸ್ವಯಂಚಾಲಿತ ತಂತ್ರಜ್ಞಾನವನ್ನು ವಿಎಎಎಸ್ ಹೊಂದಿದೆ. ನಗರ ಹೊರವಲಯದ 35 ಸಿಗ್ನಲ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು.

ಈ ಪ್ರಸ್ತಾವಕ್ಕೆ ‌‌ಗೃಹ ಇಲಾಖೆ ಒಪ್ಪಿದೆ. ಹೀಗಾಗಿ, ವಿಎಎಎಸ್ ಅಳವಡಿಸಲು ಟೆಂಡರ್‌ ಕರೆಯಲಾಗಿದೆ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್ ಆರ್.ಹಿತೇಂದ್ರ ಹೇಳಿದರು.

‍ಪ್ರಾಯೋಗಿಕವಾಗಿ ವಿಎಎಎಸ್ ಅಳವಡಿಸಿದ್ದ ಕಡೆ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ನಗರದ ಎಲ್ಲ ಸಿಗ್ನಲ್‌ಗಳಿಗೂ ಆ ಸೌಲಭ್ಯ ವಿಸ್ತರಿಸಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ 100 ಸಂಚಾರ ಜಂಕ್ಷನ್‌ಗಳನ್ನು ಗುರುತಿಸಿದ್ದು, ಅಲ್ಲಿಯೂ ಹೊಸ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದರು.

ವಿಎಎಎಸ್‌ನಲ್ಲಿ ಕ್ಯಾಮೆರಾ ಆಧಾರಿತ ಸೆನ್ಸರ್‌ ತಂತ್ರಾಂಶವಿದೆ. ಆಂಬುಲೆನ್ಸ್ ಹಾಗೂ ಅಗ್ನಿಶಾಮಕದಂತಹ ತುರ್ತು ಅಗತ್ಯವುಳ್ಳ ವಾಹನಗಳನ್ನು ಗುರುತಿಸಿ ಅವುಗಳ ಸಂಚಾರಕ್ಕೆ ಮೊದಲ ಆದ್ಯತೆ ನೀಡುತ್ತದೆ.

ಸಂಚಾರ ದಟ್ಟಣೆ ನಿರ್ವಹಣೆ ಹಾಗೂ ಹೊಸ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಟೆಂಡರ್‌ನ ತಾಂತ್ರಿಕ ಪ್ರಕ್ರಿಯೆ ವೇಳೆ ಸಲಹೆ ನೀಡಬಹುದು. ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಬಹುದು. ಅದಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹಿತೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT