ಬುಧವಾರ, ಜೂನ್ 29, 2022
26 °C

ಬಾಲಿವುಡ್​ ನಟಿ ಶ್ರೀದೇವಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲಿವುಡ್​ ನಟಿ ಶ್ರೀದೇವಿ ನಿಧನ

ಮುಂಬಯಿ: ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಬಹುಭಾಷಾ ನಟಿ ಶ್ರೀದೇವಿ ಅವರು ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಭಾನುವಾರ ತಿಳಿಸಿವೆ.

ಶನಿವಾರ ಸಂಜೆ ಅವರ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ದುಬೈಗೆ ತೆರಳಿದ್ದರು.

ಶ್ರೀದೇವಿ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಅಭಿನಯ ಮಾಡಿದ್ದರು. ನಾಲ್ಕು ದಶಕಗಳವರೆಗೆ ಸಿನಿಮಾ ವೃತ್ತಿಜೀವನದಲ್ಲಿ ಬದುಕು ಸವೆಸಿದ್ದಾರೆ.

ಶ್ರೀದೇವಿ ಅವರು ಅಭಿನಯಿಸಿದ ಚಾಂದನಿ, ಮಿ.ಇಂಡಿಯಾ, ಮಾವಲಿ ಮತ್ತು ತೋಫಾ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡು ಚಿತ್ರರಂಗದಲ್ಲಿ ಸುದ್ದು ಮಾಡಿದ್ದವು.

ಚಿತ್ರೋದ್ಯಮಕ್ಕೆ ಸಲ್ಲಿಸಿದ ಸೇವೆಗೆ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪದ್ಮ ಶ್ರೀ’ಯನ್ನು 2013ರಲ್ಲಿ ನೀಡಿ ಗೌರವಿಸಲಾಗಿತ್ತು.

ಸಾವಿನ ಸುದ್ದಿ ತಿಳಿದು ಬಾಲಿವುಡ್​ನ ನಟ-ನಟಿಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

'ನನಗೆ ಯಾವುದೇ ಮಾತುಗಳು ಬರುತ್ತಿಲ್ಲ. ಶ್ರೀದೇವಿ ಅವರನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ನೋವಾಗಿದೆ. ಈ ದಿನ ಕತ್ತಲೆ ಕವಿದಂತಾಗಿದೆ ಎಂದು ಸಂತಾಪ ವ್ಯಕ್ತಪಡಿಸಿ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.