ಕನ್ನಡದ ‘ಭಕ್ತ ಕುಂಬಾರ’ದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಶ್ರೀದೇವಿ

7

ಕನ್ನಡದ ‘ಭಕ್ತ ಕುಂಬಾರ’ದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಶ್ರೀದೇವಿ

Published:
Updated:
ಕನ್ನಡದ ‘ಭಕ್ತ ಕುಂಬಾರ’ದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಶ್ರೀದೇವಿ

ಬೆಂಗಳೂರು: ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಅವರು ಕನ್ನಡದ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ವರ ನಟ ಡಾ. ರಾಜ್‌ಕುಮಾರ್ ಜತೆ ಬಾಲನಟಿಯಾಗಿ ಅಭಿನಯಿಸಿದ್ದರು.

1974ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ನಟಿಸಿದ್ದ ಅವರು ನಂತರ ಕನ್ನಡ ಚಿತ್ರರಂಗದ ಜತೆ ಉತ್ತಮ ನಂಟು ಹೊಂದಿದ್ದರು. ಕನ್ನಡದ ಭಕ್ತ ಕುಂಬಾರ, ಹೆಣ್ಣು ಸಂಸಾರದ ಕಣ್ಣು, ಪ್ರಿಯಾ, ಯಶೋದ ಕೃಷ್ಣ, ರಾಮಾಯಣ ಮತ್ತು ಬಾಲಭಾರತ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಲಯಾಳಂ ಮತ್ತು ತೆಲುಗಿನ ಅನೇಕ ಸಿನಿಮಾಗಳಲ್ಲಿಯೂ ಶ್ರೀದೇವಿ ನಟಿಸಿದ್ದಾರೆ. ಅವರಿಗೆ 2013ರಲ್ಲಿ ‘ಪದ್ಮ ಶ್ರೀ’ ನೀಡಿ ಗೌರವಿಸಲಾಗಿತ್ತು. ಶ್ರೀದೇವಿ ಅವರು ಐದು ಬಾರಿ ಫಿಲಂ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೋಡಿ ಮಾಡಿದ್ದ ’ಇಂಗ್ಲಿಷ್ ವಿಂಗ್ಲಿಷ್’: 2012ರಲ್ಲಿ ತೆರೆ ಕಂಡಿದ್ದ, ಶ್ರೀದೇವಿ ನಟನೆಯ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 15 ವರ್ಷ ಅಂತರದ ಬಳಿಕ ಶ್ರೀದೇವಿ ನಟಿಸಿದ್ದ ಚಿತ್ರ ಇದಾಗಿತ್ತು.

ಇವನ್ನೂ ಓದಿ...

ಬಾಲಿವುಡ್​ ನಟಿ ಶ್ರೀದೇವಿ ನಿಧನ

* ನಟಿ ಶ್ರೀದೇವಿ ಅಕಾಲಿಕ ನಿಧನ ದುಃಖ ತಂದಿದೆ: ಪ್ರಧಾನಿ ಮೋದಿ ಸಂತಾಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry