ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು 36: ಸಾಧನೆ ಬಲು ಜೋರು

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿಕೆಟ್‌ಗಳ ನಡುವೆ ಚುರುಕಾಗಿ ಓಡುವುದರಲ್ಲಿ ದೋನಿ ನಿಸ್ಸೀಮರು. ವಿಕೆಟ್‌ ಕೀಪಿಂಗ್‌ ವೇಳೆ ಏಕಾಗ್ರತೆ ಕಾಪಾಡಿಕೊಳ್ಳಲು ಅವರು ತಪ್ಪದೆ ಬ್ಯಾಡ್ಮಿಂಟನ್‌ ಆಡುತ್ತಾರೆ. ಅಭ್ಯಾಸದ ವೇಳೆ ಫುಟ್‌ಬಾಲ್‌ ಆಟದಲ್ಲಿ ತೊಡಗಿಕೊಳ್ಳುತ್ತಾರೆ. ಜಿಮ್‌ನಲ್ಲೂ ಹೆಚ್ಚು ಕಸರತ್ತು ಮಾಡುತ್ತಾರೆ. ಮಷಿನ್‌ ಚೆಸ್ಟ್‌ ಪ್ರೆಸ್‌, ವಿ-ಗ್ರಿಪ್‌ ಲ್ಯಾಟರಲ್‌ ಪುಲ್‌ಡೌನ್‌, ಡಂಬಲ್‌ ಚೆಸ್ಟ್‌ ಪ್ರೆಸ್‌, ಲ್ಯಾಟರಲ್‌ ಪುಲ್‌ಡೌನ್‌, ಪ್ರೋನ್‌ ಡಂಬಲ್‌ ರೋವಿಂಗ್‌, ಆಲ್ಟರ್‌ನೆಟ್‌ ಡಂಬಲ್‌ ಕರ್ಲ್‌, ವಾಕಿಂಗ್‌ ಲಂಗ್ಸ್‌ ವಿಥ್‌ ಡಂಬಲ್‌, ಸಿಂಗಲ್‌ ಲೆಗ್‌ ಡೆಡ್‌ಲಿಫ್ಟ್‌, ರಿವರ್ಸ್‌ ಲಂಗ್ಸ್‌ ಆನ್‌ ಬೆಂಚ್‌ ಹೀಗೆ ವಿವಿಧ ಬಗೆಯ ವ್ಯಾಯಾಮಗಳನ್ನು ಮಾಡುತ್ತಾರೆ. ಸೋಡಾ ಮತ್ತು ತಂಪು ಪಾನೀಯಗಳ ಬದಲು ದಿನವೂ ತಾಜಾ ಹಣ್ಣಿನ ರಸ ಸೇವಿಸುತ್ತಾರೆ. ಅಭ್ಯಾಸದ ವೇಳೆ ಪ್ರೋಟಿನ್‌ ಶೇಖ್‌ ಕುಡಿಯುತ್ತಾರೆ.

***
ಸ್ವಿಟ್ಜರ್‌ಲೆಂಡ್‌ನ ಫೆಡರರ್‌, 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ರೋಜರ್‌ ಕೂಡ ಒಬ್ಬರು. ಎರಡು ವರ್ಷಗಳ ಹಿಂದೆ ಮಂಡಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಫೆಡರರ್‌, ಅದರಿಂದ ಚೇತರಿಸಿಕೊಂಡ ನಂತರ ಹಲವು ಟೂರ್ನಿಗಳಲ್ಲಿ ಆಡಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.


ರೋಜರ್‌ ಫೆಡರರ್‌

ಇತ್ತೀಚೆಗೆ ರಾಟರ್‌ಡ್ಯಾಮ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅವರು, ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಸಾಧನೆ ಮಾಡಿದ ಅತಿ ಹಿರಿಯ ಆಟಗಾರ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಇದರೊಂದಿಗೆ ಆ್ಯಂಡ್ರೆ ಅಗಾಸಿ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. ಜೊತೆಗೆ ವೃತ್ತಿ ಬದುಕಿನಲ್ಲಿ ಅತಿ ಹೆಚ್ಚು ವಾರಗಳ ಕಾಲ (303) ಅಗ್ರಸ್ಥಾನದಲ್ಲಿದ್ದ ಏಕೈಕ ಆಟಗಾರ ಎಂಬ ದಾಖಲೆಗೂ ಪಾತ್ರವಾಗಿದ್ದಾರೆ.

ಫಿಟ್‌ನೆಸ್‌ ಗುಟ್ಟು

ಫಿಟ್‌ನೆಸ್‌ ಕಾಪಾಡಿಕೊಂಡರಷ್ಟೇ ಯಶಸ್ಸಿನ ಶಿಖರಕ್ಕೇರಲು ಸಾಧ್ಯ ಎಂದು ನಂಬಿರುವ ಫೆಡರರ್‌, ಕೋಚ್‌ ಪಿಯೆರ್ ಫಾಗ್ನೇನಿ ಮಾರ್ಗದರ್ಶನದಲ್ಲಿ ನಿತ್ಯವೂ ವಿಶೇಷ ಕಸರತ್ತುಗಳನ್ನು ಮಾಡುತ್ತಾರೆ.

ಫೆಡರರ್‌ ಅವರ ಫಿಟ್‌ನೆಸ್‌, ಸ್ಕಿಪ್ಪಿಂಗ್‌ ಮತ್ತು ಜಾಗಿಂಗ್‌ನಿಂದ ಆರಂಭವಾಗುತ್ತದೆ. ಆಟದ ವೇಳೆ ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ಅವರು ತೋಳಿನ ಮಾಂಸಖಂಡಗಳನ್ನು ಬಲಪಡಿಸಲು ತಪ್ಪದೆ ‘ಮೆಡಿಸನ್‌ ಬಾಲ್‌’ ಕಸರತ್ತು ಮಾಡುತ್ತಾರೆ. ಪಾದರಸದಂತಹ ಚಲನೆಯನ್ನು ಮೈಗೂಡಿಸಿಕೊಂಡಿರುವ ಅವರು ಇದಕ್ಕಾಗಿ ‘ಕೋನ್ ಡ್ರಿಲ್‌’ಗಳನ್ನು ಮಾಡುತ್ತಾರೆ. ಕಾಲಿನ ಮಾಂಸಖಂಡಗಳ ಶಕ್ತಿ ಹೆಚ್ಚಿಸಿಕೊಳ್ಳಲು ‘ಎಕ್ಸಸೈಸ್‌ ಬ್ಯಾಂಡ್‌’ಗಳನ್ನು ಹಾಕಿಕೊಂಡು ವ್ಯಾಯಾಮ ಮತ್ತು ಅಭ್ಯಾಸ ನಡೆಸುತ್ತಾರೆ. ಜೊತೆಗೆ ಪುಶ್‌ಅಪ್ಸ್‌, ಕ್ರಂಚಸ್‌ ಮತ್ತು ಲೆಗ್‌ ರೈಸಸ್‌ಗಳನ್ನೂ ಮಾಡುತ್ತಾರೆ.

ಡಯಟ್‌ ವಿಚಾರದಲ್ಲೂ ರೋಜರ್‌, ಕಟ್ಟುನಿಟ್ಟು. ಅವರು ನಿತ್ಯ 2 ರಿಂದ 3 ಗಂಟೆಗೊಮ್ಮೆ ಪ್ರೋಟಿನ್‌ಯುಕ್ತ ಆಹಾರ ಸೇವಿಸುತ್ತಾರೆ. ಬೆಳಿಗ್ಗೆ ಹಾಲು ಕುಡಿಯುತ್ತಾರೆ. ಮಧ್ಯಾಹ್ನ ಮಿತ ಆಹಾರ ತೆಗೆದುಕೊಳ್ಳುತ್ತಾರೆ.  ಐಸ್‌ಕ್ರೀಂ ಮತ್ತು ಚಾಕೊಲೇಟ್‌ಗಳನ್ನು ಮುಟ್ಟುವುದಿಲ್ಲ. ನಿತ್ಯ 10 ಗಂಟೆ ನಿದ್ರಿಸುತ್ತಾರೆ. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ ಎಂದು ಅವರು ಹಿಂದೊಮ್ಮೆ ಹೇಳಿದ್ದರು.
***

ಆಗ ಆಕ್ರಮಣಕಾರಿ: ಈಗ ಶಾಂತ ಸ್ವರೂಪಿ
ಫೆಡರರ್‌, ವೃತ್ತಿಪರ ಟೆನಿಸ್‌ ಅಂಗಳಕ್ಕೆ ಕಾಲಿಟ್ಟ ಆರಂಭದಲ್ಲಿ ತುಂಬಾ ಆಕ್ರಮಣಕಾರಿಯಾಗಿದ್ದರು. ಪಂದ್ಯ ಸೋತಾಗಲೆಲ್ಲಾ ಸಿಟ್ಟಿನಿಂದ ರ‍್ಯಾಕೆಟ್‌ ಅನ್ನು ನೆಲಕ್ಕೆ ಬಡಿದು ಮುರಿದು ಹಾಕುತ್ತಿದ್ದರು.

ಮಗನ ವರ್ತನೆ ಕಂಡು ಆತಂಕಕ್ಕೆ ಒಳಗಾಗಿದ್ದ ಪೋಷಕರು ಫೆಡರರ್‌ ಅವರನ್ನು ಮನಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಅದಾದ ನಂತರ ರೋಜರ್‌, ಎಂತಹುದೇ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ ಆಡುವುದನ್ನು ಮೈಗೂಡಿಸಿಕೊಂಡಿದ್ದರು. ಇದನ್ನು ಸಂದರ್ಶನವೊಂದರ ವೇಳೆ ಅವರು ಹೇಳಿದ್ದರು.

***
ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ಹೀಗಾಗಿಯೇ ಕಠಿಣ ಪರಿಸ್ಥಿತಿಯಲ್ಲೂ ದಿಟ್ಟ ಆಟ ಆಡಲು ಆಗುತ್ತದೆ. ಅದೃಷ್ಟ ಎಲ್ಲಾ ಸಮಯದಲ್ಲೂ ನಮ್ಮ ಪರವಾಗಿರುವುದಿಲ್ಲ. ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಅದನ್ನು ಒಲಿಸಿಕೊಳ್ಳಬೇಕಾಗುತ್ತದೆ.
- ರೋಜರ್‌ ಫೆಡರರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT