ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳ ಎಐಸಿಟಿಇ ನಿಯಮ ಎಂದರೇನು?

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

1. ನಾನು ಬಿಇ (ಕಂಪ್ಯೂಟರ್ ಸೈನ್ಸ್)ಯನ್ನು 2016ರಲ್ಲಿ ತೇರ್ಗಡೆಯಾಗಿ, ಪ್ರಸ್ತುತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಮುಂದೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಳಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಅದರಿಂದ ಎಂಟೆಕ್ ಅಥವಾ ಎಂಬಿಎ ಮಾಡುವ ಉದ್ದೇಶವಿದೆ. ದಯವಿಟ್ಟು ಇದರ ಬಗ್ಗೆ ಮಾಹಿತಿ ಕೊಡಿ. ಪ್ರಸ್ತುತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಐಸಿಟಿಇ ನಿಯಮಗಳ ಬಗ್ಗೆ ಮಾಹಿತಿ ನೀಡಿ. ನನಗೆ ಬಿಇಯಲ್ಲಿ ಶೇ 50ರಷ್ಟು ಅಂಕಗಳು ಇರುವುದರಿಂದ ನಾನು ಸಹಾಯಕ ಪ್ರಾಧ್ಯಾಪಕಳಾಗಿ ಕೆಲಸ ನಿರ್ವಹಿಸಲು ಸಾಧ್ಯವಿದೆಯೇ? ಅಥವಾ ಎಂಬಿಎ ಮಾಡುವುದು ಉತ್ತಮವೇ? ಎಂಬಿಎ ಮಾಡುವುದರಿಂದ ಬಿಬಿಎ ಹಾಗೂ ಬಿಬಿಎಂ ಅವರಿಗೆ ಪಾಠ ಮಾಡಲು ಸಾಧ್ಯವಿದೆಯೇ?
ಸುಷ್ಮಾ ಬಿ.ಎಸ್., ಬೆಂಗಳೂರು

ನೀವು www.cbsenet.ac.in ಮತ್ತು www.aicte- india.org ಇಂದ ನಿಯಮಗಳ ವಿವರವನ್ನು ಪಡೆಯಿರಿ. ಯುಜಿಸಿ–ಎನ್‌ಇಟಿ ಪರೀಕ್ಷೆಯ ವಿವರವನ್ನು ಮೇಲಿನ ವೆಬ್‌ ಸೈಟ್‌ನಿಂದ ಪಡೆಯಿರಿ. ನಿಮ್ಮ ಸಂದೇಹ ದೂರವಾಗುತ್ತದೆ. ಎಂಟೆಕ್‌ ಮಾಡಿದರೆ ಟಿಕ್ನಿಕಲ್ ಸೈಡ್‌ನಲ್ಲಿ ಕೆಲಸ ಮಾಡಬಹುದು. ಎಂಬಿಎ ಮಾಡಿದರೆ ಅಡ್‌ಮಿನಿಸ್ಟ್ರೇಷನ್‌ ಕಡೆ, ಯುಜಿಸಿ–ಎನ್‌ಇಟಿ ಮಾಡಿದರೆ ಕಾಲೇಜಿನಲ್ಲಿ ಕೆಲಸ ಮಾಡಬಹುದು. ನಿಮ್ಮ ಆಸಕ್ತಿಯ ಮೇರೆಗೆ ಆಯ್ಕೆ ಮಾಡಿ.

2. ಸಿಇಟಿ, ನೀಟ್ ಏಕ್ಸಾಂ ಅಪ್ಲಿಕೇಶನ್‌, ಅದರ ಪ್ರೋಸಿಜರ್ ಮತ್ತು ಟರ್ಮ್ಸ್ ಹಾಗೂ ಕಂಡಿಷನ್‌ಗಳ ಬಗ್ಗೆ ತಿಳಿಸಿ.
ಗೀತಾ, ಊರು ಬೇಡ

ಕರ್ನಾಟಕ ಏಕ್ಸಾಮಿನೇಷನ್‌ ಅಥಾರಿಟಿ (KEA) ಇವರು CET (ಸಾಮಾನ್ಯ ಪ್ರವೇಶ ಪರೀಕ್ಷೆ) ಅನ್ನು ಗೌರ್ಮೆಂಟ್‌ ಶೇರ್‌ ಸೀಟುಗಳನ್ನು ಎಂಜಿನಿಯರಿಂಗ್, ಟೆಕ್ನಾಲಜಿ, ಬಿ.ಫಾರಂ ಕೋರ್ಸ್‌ಗಳಿಗೆ ಮತ್ತು ಫಾರಂಸೈನ್ಸ್ ಕೋರ್ಸ್‌ಗಳಿಗೆ, ಸರ್ಕಾರ, ವಿಶ್ವವಿದ್ಯಾಲಯ, ಪ್ರೈವೇಟ್ ಏಡೆಡ್,  ಪ್ರೈವೇಟ್ ಅನ್ ಎಡೆಡ್, ಪ್ರೊಫೆಷನಲ್ ಎಜುಕೇಷನ್ ಇನ್‌ಸ್ಟಿಟ್ಯೂಟ್‌ ಆಫ್ ಕರ್ನಾಟಕ ಇದರ ಪ್ರಕಟಣೆಯನ್ನು ಫೆಬ್ರುವರಿ 1ರಂದು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಿಸಿದೆ. ಫೆಬ್ರುವರಿ 28 ಕೊನೆಯ ದಿನ. 18–4–18 ಬುಧವಾರ ಮತ್ತು 19–4–18 ಗುರುವಾರ ಸಿ.ಇ.ಟಿ. 2018–19 ಪರೀಕ್ಷೆ ನಡೆಯಲಿದೆ. ಎಲಿಜಿಬಿಲಿಟಿ– ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (BE/B.Tech)ಗೆ ದ್ವಿತೀಯ ಪಿಯುಸಿ, 12ನೇ ತರಗತಿ ಪಾಸ್ ಶೇ 45 ಜನರಲ್ ಕ್ಯಾಟಗರಿಗೆ, SC/ST/OBC ಇತರರಿಗೆ ಶೇ 40 ಕನಿಷ್ಠ ಅಂಕ ಬೇಕೇ ಬೇಕು.

ಫಾರಂ ಸ್ಫೆಸಸ್–ಅಗ್ರಿಕಲ್ಚರ್, ಸೆರಿಕಲ್ಚರ್,  ಹಾರ್ಟಿಕಲ್ಚರ್‌, ಫಾರೆಸ್ಟ್ರಿ, ಫಿಷರಿಸ್ – ಇತರ ಸಂಬಂಧಪಟ್ಟ ಕೋರ್ಸ್‌ಗೆ 2ನೇ ಪಿಯುಸಿ/ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು, ಪಿ.ಸಿ.ಎಂ.ಬಿ.ಯಲ್ಲಿ.

ಹೆಚ್ಚಿನ ವಿವರವನ್ನು –www.Kea.nic.inನಿಂದ ಅಥವಾ ಫೆಬ್ರುವರಿ ಒಂದನೇ ತಾರೀಖಿನಲ್ಲಿನ ಪ್ರಕಟಣೆಯಿಂದ ಪಡೆಯಿರಿ.

ಆರ್ಕಿಟೆಕ್ಚರ್‌ ಕೋರ್ಸ್‌ಗೆ NATA ಪರೀಕ್ಷೆಯನ್ನು ಬರೆಯಬೇಕು. www.nata.in ಸಂಪರ್ಕಿಸಬೇಕಾದ ಬೇಕಾದ ವಿಳಾಸ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಬೆಂಗಳೂರು  –560012.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರದ ಪಾಲಿನ ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (ಆರ್ಯುವೇದ, ಯೋಗ, ನ್ಯಾಚುರಾಪತಿ, ಯುನಾನಿ ಮತ್ತು ಹೋಮಿಯೋಪತಿ) ಸೀಟುಗಳ ಪ್ರವೇಶಕ್ಕಾಗಿ NEET (ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ) ಸಿ.ಬಿ.ಎಸ್.ಸಿ., ನವದೆಹಲಿ, ಇವರು ನಡೆಸುತ್ತಾರೆ.

ಹೆಚ್ಚಿನ ವಿವರಗಳಿಗೆ: www.sbseneet.niv.in OR www.neet2018 niv.in

3. ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯೂನಿಕೇಷನ್ ಮಾಡಿದವರಿಗೆ ಉದ್ಯೋಗ ಸಿಗುತ್ತದೆಯೇ? ನಾನು ಸದ್ಯ ಪ್ರಥಮ ಪಿಯುಸಿ ಓದುತ್ತಿದ್ದೇನೆ. ನಾನು ಈಗ ಸಿಇಟಿಗೆ ಟ್ಯೂಷನ್ ತೆಗೆದುಕೊಳ್ಳಲೋ ಅಥವಾ ಜೆಇಇಗೋ?
ಊರು, ಹೆಸರು ಬೇಡ

ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌, ಬಹಳ ವಿದ್ಯಾರ್ಥಿಗಳು ಇಚ್ಚಿಸುವ ಬ್ರ್ಯಾಂಚ್‌. ಇಂದಿನ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು, ಸ್ಯಾಟಲೈಟ್‌ಗಳು, ಟ್ಯಾಬ್‌ಲೆಟ್‌ಗಳು ಇನ್ನೂ ಅನೇಕ ಗ್ಯಾಜೆಟ್‌ಗಳನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರ್‌ಗಳು ಕಂಡುಹಿಡಿದಿದ್ದಾರೆ.

ಇಸಿ ಎಂಜಿನಿಯರ್‌ಗಳಿಗೆ, ಟೆಕ್ನಿಕಲ್‌ ಸ್ಕಿಲ್‌, ಡಿಸೈನ್‌ ಮಾಡಿ, ಡೆವೆಲಪ್‌ ಮಾಡಿ, ಇನ್‌ಸ್ಟಾಲ್‌ ಮಾಡಿ, ಟೆಸ್ಟ್‌ ಮತ್ತು ಮೈನ್‌ಟೆನ್‌ ಕಮ್ಯೂನಿಕೇಷನ್‌ ಸಿಸ್ಟಮ್‌ ಅನ್ನು ಮಾಡುವ ತರಬೇತಿಯನ್ನು ಈ ಕೋರ್ಸ್‌ನಲ್ಲಿ ಕೊಡುತ್ತಾರೆ. ಇಸಿ ಎಂಜಿನಿಯರ್‌ಗಳು ಇಲ್ಲದೆ ನಾವು ಕಾರ್‌, ಟಿವಿ, ಸೆಲ್‌ ಫೋನ್‌, ಮೈಕ್ರೋ ಅವನ್‌ ಇದನ್ನು ಉಪಯೋಗಿಸಲು ಆಗಲ್ಲ, ಈ ಎಲ್ಲದನ್ನೂ ಡಿಸೈನ್‌ ಮಾಡಿ ಉತ್ಪಾದನೆ ಮಾಡಿ, ನಮ್ಮ ಬಳಕೆಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ನಿಮಗೆ ತಾಳ್ಮೆ ಹಾಗೂ ಸರ್‌ಕ್ಯೂಟ್‌ಗಳ ಬಳಕೆಯ ಬಗ್ಗೆ ಆಸಕ್ತಿ, ಉತ್ಪಾದಿಸುವ ಹುಮ್ಮಸ್ಸು ಇದ್ದಲ್ಲಿ ನೀವು ಈ  ಬ್ಯಾಚ್‌ ಅನ್ನು ತೆಗೆದುಕೊಳ್ಳಬಹುದು.

ಈ ಬ್ಯಾಚಿನ ಸ್ಕೋಪ್‌ ಮುಗಿಲೆತ್ತರ.

ಇಸಿ ಎಂಜಿನಿಯರ್‌ಗಳಿಗೆ ಎಲೆಕ್ಟ್ರಾನಿಕ್‌ ಎಕ್ಸ್‌ಚೇಂಜ್‌ಗಳಲ್ಲಿ, ಡಿಪಾರ್ಟ್‌ಮೆಂಟ್‌ ಆಫ್‌ ಟೆಲಿಕಮ್ಯೂನಿಕೇಷನ್ಸ್‌, ದೂರದರ್ಶನ, ಬಿಎಸ್‌ಎನ್‌ಎಲ್‌ (BSNL) ಎಲೆಕ್ಟ್ರಿಸಿಟಿ  ಬೋರ್ಡ್‌, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತಯಾರಿಸುವ ಇಂಡಸ್ಟ್ರಿಗಳಲ್ಲಿ ರಿ‍ಪೇರಿ ಮತ್ತು ಮೈನ್‌ಟೆನೆನ್ಸ್‌ ವಿಭಾಗದಲ್ಲಿ, ಮಾರ್ಕೆಟಿಂಗ್‌ ಮತ್ತು ಸೇಲ್ಸ್‌, ಟೀಚಿಂಗ್‌ ಮತ್ತು ರಿಸರ್ಚ್‌, ಇನ್ನೂ ಅನೇಕ ಕಡೆ ಉದ್ಯೋಗಾವಕಾಶವಿದೆ. ದ್ವಿತೀಯ ಪಿಯುಸಿಯಲ್ಲಿ ಫಿಸಿಕ್ಸ್‌, ಕೆಮಿಸ್ಟ್ರಿ ಮತ್ತು ಮ್ಯಾತ್‌ಮ್ಯಾಟಿಕ್ಸ್‌ನ್ನು ತೆಗೆದುಕೊಂಡು, ಎಂಟ್ರೆನ್ಸ್‌ ಪರೀಕ್ಷೆಯಲ್ಲಿ ಉತ್ತಮವಾಗಿ ಪಾಸ್‌ ಆದವರೆ IIT, NITS ಮತ್ತು ರಾಜ್ಯದ ಎಂಜಿನಿಯರಿಂಗ್‌ ಕಾಲೇಜ್‌ಗಳಿಗೆ ಸೇರಬಹುದು.

IIT ಮತ್ತು NITಗಳಿಗೆ JEE (advanced) ಅನ್ನು ಪಾಸ್‌ ಮಾಡಬೇಕು.

ಕರ್ನಾಟಕದಲ್ಲಿ ಸಿಇಟಿ (CET) ಕಾಮೆಡ್‌–ಕೆ (COMED-K) ಅನ್ನು ತೆಗೆದುಕೊಳ್ಳಬೇಕು.

ನಿಮಗೆ JEE ಪಾಸು ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲಿ ಇದಕ್ಕೆ ತರಬೇತಿಯನ್ನು ತೆಗೆದುಕೊಳ್ಳಿ. ಬರೀ JEE ಬರೆದಿದ್ದೇನೆ, ಸಿಕ್ಕೇ ಸಿಗುತ್ತೇ ಅನ್ನುವ ಧೈರ್ಯಕ್ಕಿಂತ, CET/COMED-K ಅನ್ನು ಬರೆದರೆ ಉತ್ತರ. BE/ME, B.Tech/M.Tech ಮತ್ತು PHDಯನ್ನು ಸುಲಭದಲ್ಲಿ ಮಾಡಬಹುದು.

wedsites:

www.jeeadv.acin/

wwe.keakar.nic.in

www.comedk.org/

4. ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಐಐಟಿ–ಜೆಇಇಗೆ ಹೋಗಲು ಇಷ್ಟ. ಹಾಗಾಗಿ ನೀವು ನನಗೆ ಉತ್ತಮ ಕಾಲೇಜುಗಳ ಬಗ್ಗೆ ಸಲಹೆ ನೀಡಿ. ಕರ್ನಾಟಕದಲ್ಲಿ ಐಐಟಿ–ಜೆಇಇಗೆ ಕೋಚಿಂಗ್ ಕೊಡುವ ಕಾಲೇಜುಗಳ ಬಗ್ಗೆ ತಿಳಿಸಿ.
-ವೆಂಕಟೇಶ ತ್ರಿಮಲೆ, ಊರು ಬೇಡ

ಐಐಟಿಗೆ ಹೋಗಲು ಇಚ್ಛಿಸುವವರು, 10ನೇ ತರಗತಿಯನಂತರ ಪಿಯುಸಿಗೆ ಸೇರಲು, ಫಿಸಿಕ್ಸ್‌, ಕೆಮಿಸ್ಟ್ರಿ ಮತ್ತು ಮ್ಯಾತ್‌ಮ್ಯಾಟಿಕ್ಸ್‌ ಕಾಂಬಿನೇಷನ್‌ ತೆಗೆದುಕೊಳ್ಳಬೇಕು. ಐಐಟಿ–ಜೆಇಇ ಪಾಸ್‌ ಮಾಡಲು, ಬುದ್ಧಿವಂತಿಕೆ, ಶ್ರಮ, ಅಭ್ಯಾಸ, ತರಬೇತಿ ಎಲ್ಲವೂ ಮುಖ್ಯ. ನಿಮಗೆ 80–85, ಮಾರ್ಕ್ಸ್‌ ಬರುತ್ತಿದ್ದರೆ ಈ ಪರೀಕ್ಷೆಗೆ ತರಬೇತಿ ತೆಗೆದುಕೊಳ್ಳಿ, ದಿನನಿತ್ಯ ಟೈಮ್‌ಟೇಬಲ್‌ ಹಾಕಿ, ಅದರ ಪ್ರಕಾರ ಅಭ್ಯಾಸ ಮಾಡಿ. ಡ್ರಾಯಿಂಗ್‌ಗಳನ್ನು ಅಭ್ಯಾಸ ಮಾಡಿ. ನಿಮ್ಮ ಆಹಾರ, ವ್ಯಾಯಾಮ, ಶಿಸ್ತು ಸಹ ಬಹಳ ಮುಖ್ಯ. ದಾರಿಯಲ್ಲಿ ಮಾರುವ ಪಾನೀಪುರಿಗಳು, ಮದುವೆಮನೆಗಳಲ್ಲಿ ಪನೀರ್‌ ಅನ್ನು ಖಂಡಿತ ಸೇವಿಸಬೇಡಿ.

ಕರ್ನಾಟಕದಲ್ಲಿ ಐಐಟಿ–ಜೆಇಇ ತರಬೇತಿ ಕೇಂದ್ರಗಳು:

1. BASE - Educational Services Pvt Ltd
#27, Bull Temple Road
Basavanagudi
Bangalore - 560004
Ph:080 - 42604600
www. base-edu.in

2. Ace Creation Learning Pvt Ltd
Deeksha House
163/B, 6th main, 3rd Cross
J.P. Nagar 3rd Phase
Bangalore - 560078
www.deekashalearning.com
H.O - 18001024109

3. Expert Coaching Classes
Kalakunja Road, Kodialbail
Mangalore - 575003
Ph: 8242493696
web: www.expertclasses.org

4. Winners Accademy
Corporation Bank building
Temple Road
Vanivilas Mohalla
Mysore - 570002
Ph: 9880355109
web: www.winnersacademy.com

5. Avanti Learning Centers Pvt Ltd
FF - 1B, Preeti Aashiyana building
Above Medplus
Hosur -Unkal Bypass Road
Shirur Park
Vidyanagar
Hubballi - 580021
Ph: 08268049991
www.avanti.in/
ಇನ್ನೂ ಹಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT