ನಟನೆಯ ಹದ ತಿಳಿದ ಪ್ರತಿಭಾವಂತೆ

7

ನಟನೆಯ ಹದ ತಿಳಿದ ಪ್ರತಿಭಾವಂತೆ

Published:
Updated:
ನಟನೆಯ ಹದ ತಿಳಿದ ಪ್ರತಿಭಾವಂತೆ

ಶ್ರೀದೇವಿ ಅವರು ನನ್ನ ಪಾಲಿಗಂತೂ ದಂತಕತೆ. ನಾನು ಚಿಕ್ಕವಯಸ್ಸಿನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ನಾನು ನಟಿಯಾಗಿ ರೂಪುಗೊಳ್ಳುವಲ್ಲಿ ಅವರ ನಟನೆಯ ಪ್ರಭಾವ ತುಂಬ ಇದೆ. ಚಿಕ್ಕವಳಾಗಿದ್ದಾಗ ಅವರ ‘ಸದ್ಮಾ’ ಚಿತ್ರ ನೋಡಿದ್ದೆ. ಅದು ನನಗೆ ತುಂಬ ಇಷ್ಟವಾಗಿತ್ತು. ಈಗಲೂ ಎಲ್ಲಾದರೂ ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ಆಗ ಸಿನಿಮಾದ ಕಥೆ ನನ್ನನ್ನು ತುಂಬಾ ಕಾಡಿತ್ತು. ಈಗ, ನಾನು ಒಬ್ಬ ನಟಿಯಾಗಿ ಅದೇ ಸಿನಿಮಾವನ್ನು ನೋಡಿದರೆ ಬೇರೆಬೇರೆ ಕಾರಣಗಳಿಗೆ ಇಷ್ಟವಾಗುತ್ತವೆ. ಹೀಗೂ ಅಭಿನಯಿಸಲು ಸಾಧ್ಯವಾ ಅನಿಸುತ್ತದೆ.

ನಾನು ಶ್ರೀದೇವಿ ಅವರನ್ನು ಭೇಟಿಯಾಗಿಲ್ಲ. ಆದರೆ ನಾನು ಯಾವತ್ತಿಗೂ ಅವರ ಅಭಿಮಾನಿ. ದೇಶ ಇದೀಗ ದೊಡ್ಡ ಪ್ರತಿಭಾವಂತೆಯೊಬ್ಬರನ್ನು ಕಳೆದುಕೊಂಡಿದೆ.

–ಶ್ರುತಿ ಹರಿಹರನ್‌, ನಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry