ಹಡಗು ಮುಳುಗುತ್ತಿದೆ

7

ಹಡಗು ಮುಳುಗುತ್ತಿದೆ

Published:
Updated:
ಹಡಗು ಮುಳುಗುತ್ತಿದೆ

ಕಲಬುರ್ಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ₹40 ಲಕ್ಷದ ಕೈಗಡಿಯಾರ ಕಟ್ಟಿಕೊಳ್ಳುತ್ತಾರೆ. ದೇಶದಲ್ಲಿ ಭ್ರಷ್ಟಾಚಾರದ ಸ್ಪರ್ಧೆ ಏರ್ಪಡಿಸಿದರೆ ಅವ

ರಿಗೇ ನಂಬರ್‌ ಒನ್ ಸ್ಥಾನ ಕೊಡಬೇಕಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಭಾನುವಾರ ಇಲ್ಲಿ ನಡೆದ ಬಿಜೆಪಿ ಪರಿಶಿಷ್ಟ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿ, ‘ಸಿದ್ದರಾಮಯ್ಯ ಅವರ ಹಡಗು ಮುಳುಗುತ್ತಿದೆ’ ಎಂದರು.

‘ಕರ್ನಾಟಕದಲ್ಲಿ ದಲಿತರ ಸ್ಥಿತಿ ಶೋಚನೀಯವಾಗಿದೆ. ವಿದೇಶಿ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಇಲ್ಲಿನ ಶೇ 80ರಷ್ಟು ದಲಿತರಿಗೆ ಇನ್ನೂ ಮನೆ ಇಲ್ಲ. ಶೇ 83ರಷ್ಟು ಜನ ಅಡುಗೆಗೆ ಸೌದೆ ಬಳಸುತ್ತಿದ್ದಾರೆ. ಶೇ 80ರಷ್ಟು ಮನೆಗೆ ಇನ್ನೂ ವಿದ್ಯುತ್‌ ಸಂಪರ್ಕ ಇಲ್ಲ’ ಎಂದರು.

‘2022ರ ವೇಳೆಗೆ ದೇಶದ ಎಲ್ಲ ದಲಿತರಿಗೆ ಮನೆ ನಿರ್ಮಿಸಿಕೊಡುವುದು, ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಪ್ರಧಾನಿ ಮೋದಿ ಅವರ ಗುರಿಯಾಗಿದೆ’ ಎಂದರು.

‘ರೈತ ಪರ ಸರ್ಕಾರಕ್ಕೆ ಅನ್ನದ ಆಣೆ’

ಹುಮನಾಬಾದ್‌ (ಬೀದರ್‌ ಜಿಲ್ಲೆ): ಬಿ.ಎಸ್‌.ಯಡಿಯೂರಪ್ಪ ಅವರು ರೈತರ ಸಮಾವೇಶದಲ್ಲಿ ಅನ್ನದ ಮೇಲೆ ಆಣೆ ಮಾಡಿ ರೈತ ಪರ ಸರ್ಕಾರ ನಡೆಸುವ ಭರವಸೆ ನೀಡಲಿದ್ದಾರೆ ಎಂದು ಅಮಿತ್‌ ಶಾ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕಬ್ಬು ಬೆಳೆಗಾರರೊಂದಿಗಿನ ಸಂವಾದದಲ್ಲಿ ಮಾತನಾಡಿ, ಇದಕ್ಕೂ ಮೊದಲು ಪ್ರತಿ ರೈತನ ಮನೆಯಿಂದ ಮುಷ್ಟಿ ಅಕ್ಕಿ ಸಂಗ್ರಹಿಸಿ ಅನ್ನ ಮಾಡಲಾಗುವುದು. ಆ ಸಮಾವೇಶದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ‘2014ರ ನಂತರದ ಚುನಾವಣೆಗಳಲ್ಲಿ ರೈತರು ನಮ್ಮನ್ನು ಬೆಂಬಲಿಸಿದ ಕಾರಣ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಇದು ನಿಜಾಮರ ಆಡಳಿತ’

ಸುರಪುರ/ಯಾದಗಿರಿ: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷದ ಆಡಳಿತ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ನಿಜಾಮರ ಆಡಳಿತವನ್ನು ನೆನಪಿಸಿದೆ’ ಎಂದು ಅಮಿತ್‌ ಶಾ ಟೀಕಿಸಿದರು.

ಸುರಪುರದಲ್ಲಿ ಭಾನುವಾರ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಕಾಂಗ್ರೆಸ್‌ ರಾಜ್ಯವನ್ನು ಲೂಟಿ ಮಾಡಿದೆ’ ಎಂದರು.

ಸಿಗದ ‘ಮಾತೆ’ ದರ್ಶನ: ಯಾದಗಿರಿ ಜಿಲ್ಲೆಯ ಗಡಿಭಾಗದಲ್ಲಿರುವ ಯಾನಾಗುಂದಿಯಲ್ಲಿ ಭಾನುವಾರ ಶಾ ಅವರಿಗೆ ಮಾತಾ ಮಾಣಿಕೇಶ್ವರಿ ದರ್ಶನ ಸಿಗಲಿಲ್ಲ. ದೇಗುಲ ಸಮಿತಿಗೆ ಮೊದಲೇ ತಿಳಿಸದ ಕಾರಣ ಮಾತೆ ದರ್ಶನ ಕರುಣಿಸಲಿಲ್ಲ ಎಂದು ದೇಗುಲದ ಮೂಲ ತಿಳಿಸಿದೆ. ನಂತರ ಕೋಲಿ ಸಮಾಜದಿಂದ ಅವರು ಸನ್ಮಾನ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry