ಬಾಕ್ಸಿಂಗ್: ಅಮಿತ್‌ಗೆ ಚಿನ್ನ; ಮೇರಿ ಕೋಮ್‌ಗೆ ಬೆಳ್ಳಿ

7

ಬಾಕ್ಸಿಂಗ್: ಅಮಿತ್‌ಗೆ ಚಿನ್ನ; ಮೇರಿ ಕೋಮ್‌ಗೆ ಬೆಳ್ಳಿ

Published:
Updated:
ಬಾಕ್ಸಿಂಗ್: ಅಮಿತ್‌ಗೆ ಚಿನ್ನ; ಮೇರಿ ಕೋಮ್‌ಗೆ ಬೆಳ್ಳಿ

ಸೋಫಿಯಾ, ಬಲ್ಗೇರಿಯಾ: ಭಾರತದ ಅಮಿತ್ ಪಂಗಾಲ್ ಮತ್ತು ಮೇರಿ ಕೋಮ್ ಅವರು ಇಲ್ಲಿ ನಡೆದ 69ನೇ ಸ್ಟ್ರಾಂಡಿಯಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

ಪುರುಷರ 49 ಕೆ.ಜಿ. ವಿಭಾಗದಲ್ಲಿ ಅಮಿತ್ ಅವರು ಮೊರಾಕ್ಕೊದ ಮನುಯೆವರ್ ಮೊರ್ದಾಜಿ ಅವರನ್ನು ಮಣಿಸಿದರು. ಪಂದ್ಯದ ಆರಂಭದಲ್ಲಿ ಕಠಿಣ ಪೈಪೋಟಿ ಎದುರಿಸಿದ ಅಮಿತ್ ನಂತರ ಚೇತರಿಸಿಕೊಂಡು ಬಲಯುತವಾದ ಪಂಚ್‌ಗಳನ್ನು ಪ್ರಯೋಗಿಸಿದರು. ಇದರಿಂದಾಗಿ ಮೊರ್ದಾಜಿ ಹಿಮ್ಮೆಟ್ಟಿದರು. ಹರಿಯಾಣದ 23 ವರ್ಷದ ಅಮಿತ್ ಅವರು ಈಚೆಗೆ ಇಂಡಿಯಾ ಓಪನ್ ಬಾಕ್ಸಿಂಗ್‌ನಲ್ಲಿಯೂ ಚಿನ್ನ ಗೆದ್ದಿತ್ತು.

ಮಹಿಳೆಯರ 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್ ಅವರು ಬಲ್ಗೇರಿಯಾದ ಸೆವ್ದಾ ಅಸೆನೊವಾ  ವಿರುದ್ಧ ಸೋತರು. 81 ಕೆ.ಜಿ. ಮೇಲಿನವರ ವಿಭಾಗದಲ್ಲಿ ಸೀಮಾ ಪೂನಿಯಾ ಅವರು ರಷ್ಯಾದ ಅನ್ನಾ ಇವಾನೊವಾ ವಿರುದ್ಧ ಸೋತು ಬೆಳ್ಳಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry