ವಿಮಾನ ನಿಲ್ದಾಣಗಳಲ್ಲಿ ಖಾದಿ ಮಳಿಗೆ

7

ವಿಮಾನ ನಿಲ್ದಾಣಗಳಲ್ಲಿ ಖಾದಿ ಮಳಿಗೆ

Published:
Updated:

ಮೈಸೂರು: ದೇಶದ 100 ವಿಮಾನ ನಿಲ್ದಾಣಗಳಲ್ಲಿ ಖಾದಿ ಮಳಿಗೆಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಖಾದಿ ಮತ್ತು ಗ್ರಾಮೋದ್ಯಮ ಆಯೋಗದ (ಕೆವಿಐಸಿ) ಅಧ್ಯಕ್ಷ ವಿನಯ್‌ ಕುಮಾರ್‌ ಸಕ್ಸೇನಾ ಹೇಳಿದರು.

ವಿಶಾಖಪಟ್ಟಣ, ಅಹಮದಾಬಾದ್‌ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಖಾದಿ ಮಳಿಗೆ ತೆರೆಯಲಾಗಿದೆ. ಇನ್ನೂ ಏಳು ವಿಮಾನ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಅನುಮತಿ ದೊರೆತಿದೆ. ಈ ಯೋಜನೆಯನ್ನು ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮವನ್ನು ಖಾದಿ ಮತ್ತು ಗ್ರಾಮೋದ್ಯಮದ ಉತ್ಕೃಷ್ಟ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಖಾದಿ ಪ್ಲಾಜಾ ಸ್ಥಾಪನೆ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಮ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್‌ ಮಾತನಾಡಿ, ‘ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಖಾದಿ ಪ್ಲಾಜಾಗಳನ್ನು ಸ್ಥಾಪಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry