ರ‍್ಯಾಂಕಿಂಗ್‌: 12ನೇ ಸ್ಥಾನಕ್ಕೇರಿದ ಭುವನೇಶ್ವರ್‌ ಕುಮಾರ್‌

7

ರ‍್ಯಾಂಕಿಂಗ್‌: 12ನೇ ಸ್ಥಾನಕ್ಕೇರಿದ ಭುವನೇಶ್ವರ್‌ ಕುಮಾರ್‌

Published:
Updated:
ರ‍್ಯಾಂಕಿಂಗ್‌: 12ನೇ ಸ್ಥಾನಕ್ಕೇರಿದ ಭುವನೇಶ್ವರ್‌ ಕುಮಾರ್‌

ದುಬೈ: ಭಾರತದ ಭುವನೇಶ್ವರ್‌ ಕುಮಾರ್‌ ಅವರು ಭಾನುವಾರ ಐಸಿಸಿ ಬಿಡುಗಡೆ ಮಾಡಿರುವ ಟ್ವೆಂಟಿ–20 ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಭುವನೇಶ್ವರ್‌ ನಿರ್ಣಾಯಕ ಪಾತ್ರ ವಹಿಸಿದ್ದರು. 3 ಪಂದ್ಯಗಳಿಂದ 7 ವಿಕೆಟ್‌ ಉರುಳಿಸಿದ್ದ ಅವರು ‘ಸರಣಿ ಶ್ರೇಷ್ಠ’ ಗೌರವಕ್ಕೂ ಭಾಜನರಾಗಿದ್ದರು. ಈ ಸಾಧನೆಯಿಂದಾಗಿ ಒಟ್ಟು 20 ಸ್ಥಾನ ಪ್ರಗತಿ ಕಂಡಿದ್ದಾರೆ.

ಅಫ್ಗಾನಿಸ್ತಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌, ಅಗ್ರಸ್ಥಾನ ಪಡೆದಿದ್ದಾರೆ. 19 ವರ್ಷದ ರಶೀದ್‌, ಇತ್ತೀಚೆಗೆ ಏಕದಿನ ಕ್ರಮಾಂಕ ಪಟ್ಟಿಯಲ್ಲೂ ಮೊದಲ ಸ್ಥಾನ ಗಳಿಸಿದ್ದರು.

28ನೇ ಸ್ಥಾನಕ್ಕೆ ಶಿಖರ್‌: ಟ್ವೆಂಟಿ–20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶಿಖರ್‌ ಧವನ್‌ 28ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಇದು ಧವನ್‌, ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಧವನ್‌, ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದರು. ಅವರು 3 ಪಂದ್ಯಗಳಿಂದ 143 ರನ್‌ ಕಲೆಹಾಕಿದ್ದರು. ಹೀಗಾಗಿ ಒಟ್ಟು 14 ಸ್ಥಾನ ಮೇಲೇರಿದ್ದಾರೆ.

ತಂಡಗಳ ಕ್ರಮಾಂಕ

ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಹರಿಣಗಳ ನಾಡಿನಲ್ಲಿ ಸರಣಿ ಗೆದ್ದಿದ್ದರಿಂದ ತಂಡದ ಖಾತೆಗೆ ಒಂದು ರ‍್ಯಾಂಕಿಂಗ್‌ ಪಾಯಿಂಟ್‌ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ ಒಂದು ಪಾಯಿಂಟ್‌ ಕಳೆದುಕೊಂಡಿದೆ. ಈ ತಂಡ ಏಳನೇ ಸ್ಥಾನದಲ್ಲಿ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry