ಅರುಣಾಗೆ ಏಳನೇ ಸ್ಥಾನ

7

ಅರುಣಾಗೆ ಏಳನೇ ಸ್ಥಾನ

Published:
Updated:

ಮೆಲ್ಬರ್ನ್‌: ವಾಲ್ಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಅರುಣಾ ಬುದ್ದಾ ರೆಡ್ಡಿ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ಫ್ಲೋರ್ ವಿಭಾಗದಲ್ಲಿ ಏಳನೇ ಸ್ಥಾನ ಗಳಿಸಿದರು.

ಶನಿವಾರ ಅವರು ವಾಲ್ಟ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ಪುರುಷರ ಪ್ಯಾರಲಲ್ ಬಾರ್‌ ವಿಭಾಗದಲ್ಲಿ ರಾಕೇಶ್‌ ಪಾತ್ರ 13.433 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿದರು. ವಾಲ್ಟ್ ವಿಭಾಗದಲ್ಲಿ ಆಶಿಶ್ ಕುಮಾರ್ ಎಂಟನೇ ಸ್ಥಾನ ಗಳಿಸಿದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಅವರು ಕಂಚು ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry