‘ರುಸ್ತುಂ–2’ ಪರೀಕ್ಷಾರ್ಥ ಉಡಾವಣೆ ಯಶಸ್ವಿ

7

‘ರುಸ್ತುಂ–2’ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Published:
Updated:
‘ರುಸ್ತುಂ–2’ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಚಳ್ಳಕೆರೆಯಲ್ಲಿ ನಡೆಸಿದ ‘ರುಸ್ತುಂ–2’ ಡ್ರೋನ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಇದು ಭೂಮಿಯಿಂದ ಮಧ್ಯಮ ಎತ್ತರಕ್ಕೆ ಹಾರುವ, ದೀರ್ಘ ಬಾಳಿಕೆಯ ಸಾಮರ್ಥ್ಯ ಹೊಂದಿರುವ ಮಾನವರಹಿತ ವೈಮಾನಿಕ ವಾಹನ (ಯುಎವಿ). ಈ ಯುಎವಿ ಯೋಜನೆಯ ಮೊತ್ತ ₹1,500 ಕೋಟಿಯಾಗಿದ್ದು, ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಕೈಗೆತ್ತಿ ಕೊಳ್ಳಲಾಗಿದೆ.

ಅಮೆರಿಕ ಸೇನೆಯಲ್ಲಿರುವ ಕಣ್ಗಾವಲು ಮತ್ತು ಶತ್ರು ನೆಲೆಗಳನ್ನು ಪತ್ತೆ ಹಚ್ಚುವ ಡ್ರೋನ್‌ಗಳ ಕಾರ್ಯಾಚರಣೆ ಅಧ್ಯಯನ ನಡೆಸಿ ‘ರುಸ್ತುಂ–2’ ಅಭಿವೃದ್ಧಿಪಡಿಸಲಾಗಿದೆ. ಇದು ಸತತ 24 ಗಂಟೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಡಿಆರ್‌ಡಿಒ ಅಧ್ಯಕ್ಷ ಎಸ್‌.ಕ್ರಿಸ್ಟೊಫರ್, ವೈಮಾನಿಕ ವ್ಯವಸ್ಥೆಯ ಮಹಾ ನಿರ್ದೇಶಕ ಸಿ.ಪಿ.ರಾಮನಾರಾಯಣನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ ವ್ಯವಸ್ಥೆಯ ಮಹಾ ನಿರ್ದೇಶಕಿ ಜೆ.ಮಂಜುಳಾ ಮತ್ತು ಸಂಸ್ಥೆಯ ಹಿರಿಯ ವಿಜ್ಞಾನಿಗಳು ಪರೀಕ್ಷಾರ್ಥ ಉಡಾವಣೆ ಸಂದರ್ಭದಲ್ಲಿ ಇದ್ದರು.

‘ಇದು ಬಳಸಲು ಅನುಕೂಲ ಆಗುವ ವಿನ್ಯಾಸ, ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ಮೊದಲ ಡ್ರೋನ್‌’ ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry