ಬ್ಯಾಡ್ಮಿಂಟನ್: ಕಶ್ಯಪ್‌ಗೆ ಪ್ರಶಸ್ತಿ

7

ಬ್ಯಾಡ್ಮಿಂಟನ್: ಕಶ್ಯಪ್‌ಗೆ ಪ್ರಶಸ್ತಿ

Published:
Updated:
ಬ್ಯಾಡ್ಮಿಂಟನ್: ಕಶ್ಯಪ್‌ಗೆ ಪ್ರಶಸ್ತಿ

ವಿಯೆನ್ನಾ: ಭಾರತದ ಪರುಪಳ್ಳಿ ಕಶ್ಯಪ್‌ ಅವರು ಆಸ್ಟ್ರಿಯನ್‌ ಓಪನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ರಾತ್ರಿ ನಡೆದ ಪುರು ಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟ ದಲ್ಲಿ ಕಶ್ಯಪ್‌ 23–21, 21–14ರ ಗೇಮ್‌ಗಳಿಂದ ಮಲೇಷ್ಯಾದ ಜೂನ್‌ ವೀ ಚೀಮ್‌ ಅವರನ್ನು ಸೋಲಿಸಿದರು. ಈ ಮೂಲಕ ಮೂರು ವರ್ಷಗಳ ನಂತರ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆದ್ದರು.

ಟೂರ್ನಿಯ ಆರಂಭದಿಂದಲೂ ಉತ್ತಮ ಆಟ ಆಡಿ ಗಮನ ಸೆಳೆದಿದ್ದ ಕಶ್ಯಪ್‌, ಫೈನಲ್‌ ಪಂದ್ಯದಲ್ಲೂ ಮೋಡಿ ಮಾಡಿದರು. ಅವರು 37 ನಿಮಿಷಗಳಲ್ಲಿ ಎದುರಾಳಿಯ ಸವಾಲು ಮೀರಿದರು. 2018ರಲ್ಲಿ ಕಶ್ಯಪ್ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಹೋದ ಸಲದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಶ್ಯಪ್ ಚಿನ್ನ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry