ಎನ್‌ಕೌಂಟರ್‌ಗೆ ಬಲಿಯಾದ ಫೌಜಿ

7

ಎನ್‌ಕೌಂಟರ್‌ಗೆ ಬಲಿಯಾದ ಫೌಜಿ

Published:
Updated:

ಲಖಿಂಪುರ್‌ ಖಿರಿ: ವಿಶೇಷ ಕಾರ್ಯಪಡೆ ಮತ್ತು ಖಿರಿ ಪೊಲೀಸರು ಶನಿವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಲು ಚೌಧರಿ ಅಲಿಯಾಸ್‌ ಫೌಜಿ ಎಂಬಾತ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಚೌಧರಿಯ ಮೇಲೆ ವಿವಿಧ ರಾಜ್ಯಗಳಲ್ಲಿ ಕೊಲೆ, ದರೋಡೆ ಮತ್ತು ಲೂಟಿ ಸೇರಿದಂತೆ 19 ಪ್ರಕರಣಗಳು ದಾಖಲಾಗಿವೆ. ಆತನ ತಲೆಗೆ 50 ಸಾವಿರ ಘೋಷಿಸಲಾಗಿತ್ತು.2015 ರಲ್ಲಿ ಹರಿಯಾಣದ ಜೈಲಿನಿಂದ ಚೌಧರಿ ತಪ್ಪಿಸಿಕೊಂಡು ನಾಪತ್ತೆಯಾಗಿದ್ದ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಿಸ್ತೂಲ್‌ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry