ಸಿರಿಯಾದಲ್ಲಿ ಹಿಂಸಾಚಾರ: ಕದನವಿರಾಮ ಘೋಷಣೆಗೆ ಒಪ್ಪಿಗೆ

7

ಸಿರಿಯಾದಲ್ಲಿ ಹಿಂಸಾಚಾರ: ಕದನವಿರಾಮ ಘೋಷಣೆಗೆ ಒಪ್ಪಿಗೆ

Published:
Updated:
ಸಿರಿಯಾದಲ್ಲಿ ಹಿಂಸಾಚಾರ: ಕದನವಿರಾಮ ಘೋಷಣೆಗೆ ಒಪ್ಪಿಗೆ

ವಿಶ್ವಸಂಸ್ಥೆ (ಎಎಫ್‌ಪಿ): ಸಿರಿಯಾದಲ್ಲಿ 30 ದಿನಗಳ ಕಾಲ ಕದನವಿರಾಮ ಘೋಷಣೆಗೆ ಸಂಬಂಧಿಸಿದ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಅವಿರೋಧವಾಗಿ ಮತ ಚಲಾಯಿಸಿದೆ.

ಸಿರಿಯಾದಲ್ಲಿ ನೆರವು ಕಾರ್ಯ ನಡೆಸಲು ಈ ನಿರ್ಣಯ ಅನುವು ಮಾಡಿಕೊಡಲಿದೆ. ಆದರೆ, ಈ ಘೋಷಣೆ ಎಂದಿನಿಂದ ಜಾರಿಯಾಗಲಿದೆ ಎಂಬುದರ ಬಗ್ಗೆ ಮಂಡಳಿಯು ಸ್ಪಷ್ಟಪಡಿಸಿಲ್ಲ. 

ಮತ ಚಲಾವಣೆಯು ಗುರುವಾರ ನಡೆಯಬೇಕಿತ್ತು. ಆದರೆ, ಸಿರಿಯಾದ ಅಧ್ಯಕ್ಷ ಬಶರ್‌ ಅಲ್‌–ಅಸಾದ್‌ ಅವರಿಗೆ ಬೆಂಬಲವಾಗಿರುವ ರಷ್ಯಾ ತನ್ನ ವಿಟೊ ಅಧಿಕಾರ ಬಳಸಿ ಇದಕ್ಕೆ ಅಡ್ಡಿಪಡಿಸಬಹುದು ಎಂಬ ಕಾರಣದಿಂದ ಮಂಡಳಿಯ ಸದಸ್ಯರು ಸಂಧಾನ ಮಾತುಕತೆಯಲ್ಲಿ ತೊಡಗಿದ್ದರು.

‘ರಷ್ಯಾ ಬೆಂಬಲಕ್ಕಾಗಿ ಕಾಯುತ್ತ ಕುಳಿತ ಪರಿಣಾಮ, ಸಿರಿಯಾದಲ್ಲಿನ ಸಾವು–ನೋವು ಹೆಚ್ಚುತ್ತಾ ಹೋಯಿತು’ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

519 ಸಾವು: ಸಿರಿಯಾದ ಸರ್ಕಾರಿ ಬೆಂಬಲಿತ ಪಡೆಗಳು ಗೊವುಟಾದ ಬಂಡುಕೋರರ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿ ಮುಂದುವರಿಸಿದ್ದು, ಇಲ್ಲಿಯವರೆಗೆ 127 ಮಕ್ಕಳು ಸೇರಿದಂತೆ ಒಟ್ಟು 519 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ 41 ಜನರು ಮೃತಪಟ್ಟಿದ್ದಾರೆ.

*

ಸತತ ದಾಳಿಗೆ ಒಳಗಾಗುತ್ತಿರುವ ಪೂರ್ವ ಗೊವುಟಾ ನರಕ ಸದೃಶವಾಗಿದೆ. ಕದನವಿರಾಮ ಘೋಷಣೆ ತಕ್ಷಣವೇ ಜಾರಿಯಾಗಬೇಕು

–ಅಂಟೊನಿಯೊ ಗುಟೆರಸ್‌ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry