ವೆಂಕಟಾದ್ರಿ ಸ್ವಾಮಿಯ 83ನೇ ಆರಾಧನಾ ಮಹೋತ್ಸವ

7

ವೆಂಕಟಾದ್ರಿ ಸ್ವಾಮಿಯ 83ನೇ ಆರಾಧನಾ ಮಹೋತ್ಸವ

Published:
Updated:

ಹೊಸಕೋಟೆ: ತಾಲ್ಲೂಕಿನ ಚೊಕ್ಕಹಳ್ಳಿಯಲ್ಲಿನ ವೆಂಕಟಾದ್ರಿ ಮಠದಲ್ಲಿ ವೆಂಕಟಾದ್ರಿ ಸ್ವಾಮಿಯ 83ನೇ ವರ್ಷದ ಆರಾಧನಾ ಮತ್ತು ಜಾತ್ರಾ ಮಹೋತ್ಸವ ಭಾನುವಾರ ನಡೆಯಿತು.

ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಮಠದ ಆವರಣದಲ್ಲಿ ವಿಶೇಷ ಪೂಜೆ, ಹೋಮ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್, ‘ಜನರಲ್ಲಿ ಧಾರ್ಮಿಕ ಭಾವನೆ, ನೈತಿಕ ಮೌಲ್ಯ ಬೆಳಸುವಲ್ಲಿ ಮಠ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry