ರೋಮ್: ಕೊಲೊಸಿಯಂಗೆ ಕೆಂಪು ಬಣ್ಣ

7

ರೋಮ್: ಕೊಲೊಸಿಯಂಗೆ ಕೆಂಪು ಬಣ್ಣ

Published:
Updated:
ರೋಮ್: ಕೊಲೊಸಿಯಂಗೆ ಕೆಂಪು ಬಣ್ಣ

ರೋಮ್(ರಾಯಿಟರ್ಸ್): ಧರ್ಮನಿಂದನೆ ಕಾನೂನಿನ ಅಡಿ ಕ್ರೈಸ್ತ ಮಹಿಳೆಯೊಬ್ಬರನ್ನು ಮರಣದಂಡನೆಗೆ ಗುರಿಪಡಿಸಿರುವ ಪಾಕಿಸ್ತಾನದ ನಿಲುವು ವಿರೋಧಿಸಿ, ಇಲ್ಲಿನ ಪ್ರಾಚೀನ ಕೊಲೊಸಿಯಂ ಮಹಾ ಬಯಲು ರಂಗ ಕಮಾನನ್ನು ಶನಿವಾರ ರಾತ್ರಿ ಕೆಂಪು ದೀಪಗಳಿಂದ ಬೆಳಗಿಸಲಾಗಿತ್ತು.

ವಿಶ್ವದಾದ್ಯಂತ ಕ್ರೈಸ್ತರ ಮೇಲಿನ ದೌರ್ಜನ್ಯ ವಿರೋಧಿಸುವುದು ಮತ್ತು ಕ್ರೈಸ್ತರ ಒಗ್ಗಟ್ಟು ಪ್ರದರ್ಶಿಸುವುದಕ್ಕಾಗಿ ಕೆಂಪು ದೀಪಗಳನ್ನು ಬೆಳಗಿಸಲಾಗಿತ್ತು.

ಪಾಕಿಸ್ತಾನದ ಕ್ರೈಸ್ತ ಮಹಿಳೆ ಅಸಿಯಾ ಬೀಬಿ, ನೆರೆಯವರು ತಾನು ಮುಸ್ಲಿಂ ಧರ್ಮದವಳಲ್ಲ ಎಂಬ ಕಾರಣಕ್ಕೆ  ಕುಡಿಯಲು ನೀರು ಕೊಟ್ಟಿರಲಿಲ್ಲ ಎಂದು ಜಗಳ ಮಾಡಿದ್ದರು. ಅಲ್ಲದೆ, ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್‌ರನ್ನು ನಿಂದಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿತ್ತು. ವಿಚಾರಣೆಯ ನಂತರ 2010ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಅಸಿಯಾ ಬೀಬಿಯವರ ಗಂಡ ಮತ್ತು ಮಗಳ ಮಾತುಗಳನ್ನು ಕೇಳಲು ಹುತಾತ್ಮರ ಸಂಕೇತವಾದ ರಂಗಬಯಲು ಕಮಾನಿನ ಹೊರಗೆ ನೂರಾರು ಮಂದಿ ನೆರೆದಿದ್ದರು.

‘ಇದು ಕ್ರೈಸ್ತರನ್ನು ಅಶುದ್ಧರು ಎಂದು ಪರಿಗಣಿಸಿ, ಅವರ ವಿರುದ್ಧ ದ್ವೇಷ ಕಾರಿರುವ ಘಟನೆ. ಧರ್ಮನಿಂದನೆ ಕುರಿತು ಆಕೆಗೆ ಏನೂ ಗೊತ್ತಿಲ್ಲ’ ಎಂದು ಬೀಬಿಯವರ ಗಂಡ ಆಶಿಕ್ ಮಸಿಹ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry