ಎಚ್‍ಡಿಎಫ್‍ಸಿ ಲೈಫ್ ಪೆನ್ಶನ್ ಖಾತರಿ ಯೋಜನೆ ಜಾರಿ

7

ಎಚ್‍ಡಿಎಫ್‍ಸಿ ಲೈಫ್ ಪೆನ್ಶನ್ ಖಾತರಿ ಯೋಜನೆ ಜಾರಿ

Published:
Updated:

ಬೆಂಗಳೂರು: ಜೀವವಿಮೆ ಕಂಪನಿ ಎಚ್‍ಡಿಎಫ್‍ಸಿ ಲೈಫ್, ‘ಎಚ್‍ಡಿಎಫ್‍ಸಿ ಲೈಫ್ ಪೆನ್ಶನ್ ಗ್ಯಾರಂಟೀಡ್ ಪ್ಲ್ಯಾನ್ (ಪಿಂಚಣಿ) ಪರಿಚಯಿಸಿದೆ.

ವರ್ಷಕ್ಕೆ ಒಂದು ಬಾರಿ ಕಂತು ಪಾವತಿ ಮಾಡುವ ಯೋಜನೆ ಇದಾಗಿದೆ. ಇದೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಗೆ ತರಲಾಗಿದೆ.

ನಿವೃತ್ತಿ ನಂತರ ಆರಾಮದಾಯಕ ಜೀವನ ಸಾಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಾತರಿ ಮಾಡಿಕೊಳ್ಳಬೇಕಿದೆ. ಈ ವಿಮೆಯನ್ನು ಪಡೆದುಕೊಂಡರೆ ನಿವೃತ್ತಿ ನಂತರ ನಿಯಮಿತವಾಗಿ ಆದಾಯ ಪಡೆಯಲು ಸಾಧ್ಯವಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಅಥವಾ ನಿವೃತ್ತಿ ಹೊಂದಿದವರಿಗೆ ಈ ವಿಮೆ ಅತ್ಯಂತ ಸೂಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry