ಹಳಿ ದಾಟುವಾಗ ರೈಲು ಡಿಕ್ಕಿ: ಆರು ಮಂದಿ ಯುವಕರು ಸಾವು

7

ಹಳಿ ದಾಟುವಾಗ ರೈಲು ಡಿಕ್ಕಿ: ಆರು ಮಂದಿ ಯುವಕರು ಸಾವು

Published:
Updated:
ಹಳಿ ದಾಟುವಾಗ ರೈಲು ಡಿಕ್ಕಿ: ಆರು ಮಂದಿ ಯುವಕರು ಸಾವು

ಉತ್ತರ ಪ್ರದೇಶ: ರೈಲು ಹಳಿ ದಾಟುವಾಗ ಡಿಕ್ಕಿ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದಾರೆ.

ಹಾಪುರ್‌ ಕ್ರಾಸಿಂಗ್‌ನಲ್ಲಿ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ‌

14ರಿಂದ 16 ವರ್ಷ ವಯಸ್ಸಿನ 7 ಮಂದಿ ಯುವಕರು ದೈನಂದಿನ ವೇತನ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಕೆಲಸ ನಿಮಿತ್ತ ಹೈದರಾಬಾದ್‌ಗೆ ತೆರಳುತ್ತಿದ್ದರು.

ಮೃತರನ್ನು ವಿಜಯ್‌, ಅಕಾಶ್‌, ರಾಹುಲ್‌, ಸಮೀರ್‌, ಆರಿಫ್, ಸಲೀಂ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಎಲ್ಲರೂ ಮೊಬೈಲ್‌ನಲ್ಲಿ ಸಂಗೀತ ಆಲಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry