ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಬೈಚುಂಗ್‌ ಭುಟಿಯಾ ರಾಜೀನಾಮೆ

7
ಫುಟ್ಬಾಲ್‌ ತಂಡದ ಮಾಜಿ ಆಟಗಾರ ಭುಟಿಯಾ

ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಬೈಚುಂಗ್‌ ಭುಟಿಯಾ ರಾಜೀನಾಮೆ

Published:
Updated:
ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಬೈಚುಂಗ್‌ ಭುಟಿಯಾ ರಾಜೀನಾಮೆ

ನವದೆಹಲಿ: ಭಾರತೀಯ ಫುಟ್ಬಾಲ್‌ ತಂಡದ ಮಾಜಿ ಆಟಗಾರ ಬೈಚುಂಗ್‌ ಭುಟಿಯಾ ಅವರು ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷದ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

‘ಟಿಎಂಸಿಯ ಸದಸ್ಯತ್ವ ಮತ್ತು ಪಕ್ಷದ ಎಲ್ಲ ಹುದ್ದೆಗಳಿಗೆ ಇಂದು ರಾಜೀನಾಮೆ ನೀಡಿದ್ದೇನೆ. ಈಗ ನಾನು ಯಾವುದೇ ಪಕ್ಷದ ಸದಸ್ಯನಲ್ಲ’ ಎಂದು ರಾಜೀನಾಮೆ ನೀಡಿದ್ದನ್ನು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ರಾಜೀನಾಮೆ ಕುರಿತು ಪಕ್ಷದ ವಕ್ತಾರರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2013ರಲ್ಲಿ ಟಿಎಂಸಿ ಸೇರಿದ್ದ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಲಿಂಗ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಎಸ್‌.ಎಸ್‌.ಅಹ್ಲುವಾಲಿಯಾ ಎದುರು 2 ಲಕ್ಷ ಮತಗಳ ಅಂತರದಿಂದ ಸೋತಿದ್ದರು.

ಗೋರ್ಖಾಲ್ಯಾಂಡ್‌ ರಾಜ್ಯ ಸ್ಥಾಪನೆಗೆ ಎದ್ದಿರುವ ಕೂಗಿನ ಕುರಿತು ಟಿಎಂಸಿ ಪಕ್ಷ ಸ್ಪಷ್ಟ ನಿಲುವು ತಳೆಯದಿರುವುದು. ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ ವರ್ಷ ನಡೆದ ಹಿಂಸಾಚಾರ ಭುಟಿಯಾ ಅವರಿಗೆ ಅಸಮಾಧಾನ ತರಿಸಿತ್ತು ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry