ಕಾರವಾರ ಕಡಲ ತೀರದಲ್ಲಿ ಹಾಯಿ ಮೀನಿನ ಕಳೇಬರ ಪತ್ತೆ

7

ಕಾರವಾರ ಕಡಲ ತೀರದಲ್ಲಿ ಹಾಯಿ ಮೀನಿನ ಕಳೇಬರ ಪತ್ತೆ

Published:
Updated:
ಕಾರವಾರ ಕಡಲ ತೀರದಲ್ಲಿ ಹಾಯಿ ಮೀನಿನ ಕಳೇಬರ ಪತ್ತೆ

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಹಾಯಿ ಮೀನಿನ (ಬ್ಲ್ಯಾಕ್ ಮೆರ್ಲಿನ್) ಕಳೇಬರ ಸೋಮವಾರ ಪತ್ತೆಯಾಗಿದೆ.

‘ಸುಮಾರು ಮೂರು ಮೀಟರ್ ಉದ್ದವಿರುವ ಅದರ ರೆಕ್ಕೆ ಮತ್ತು ಕೊಕ್ಕು ತುಂಡಾಗಿತ್ತು. ಬೇಟೆಯಾಡಿದ ಮೀನುಗಾರರು ಅದನ್ನು ಸಾಗಿಸುವ ಸಂದರ್ಭದಲ್ಲಿ ಕೊಳೆತಿರುವ ಕಾರಣ ಇಲ್ಲಿ ಎಸೆದಿರಬಹುದು’ ಎಂದು ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಅತ್ಯಂತ ದುಬಾರಿ ಮೀನು: ದಕ್ಷಿಣ ಏಷ್ಯಾದ ಆಳ ಸಮುದ್ರದಲ್ಲಿ ಕಂಡುಬರುವ ಈ ಜಾತಿಯ ಮೀನುಗಳಿಂದ ತಯಾರಿಸಿದ ಖಾದ್ಯಗಳಿಗೆ ಜಪಾನ್, ಚೀನಾ, ಅಮೆರಿಕ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಇದರ ಮಾಂಸಕ್ಕೆ ಮಾರುಕಟ್ಟೆಯಲ್ಲಿ ದುಬಾರಿ ದರವಿದೆ.

ಈ ಮೀನಿಗೆ ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿದೆ. ದೊಡ್ಡ ಎಲುಬು ಹೊಂದಿರುವ ಈ ಪ್ರಭೇದದ ಮೀನುಗಳು ನಾಲ್ಕೂವರೆ ಮೀಟರ್ ಉದ್ದ ಬೆಳೆಯುತ್ತವೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry