ಸವದತ್ತಿಯಲ್ಲಿ ಜಗ್ಗಲಿಗೆ ಬಾರಿಸಿದ ರಾಹುಲ್‌, ಸಿದ್ದರಾಮಯ್ಯ

7

ಸವದತ್ತಿಯಲ್ಲಿ ಜಗ್ಗಲಿಗೆ ಬಾರಿಸಿದ ರಾಹುಲ್‌, ಸಿದ್ದರಾಮಯ್ಯ

Published:
Updated:
ಸವದತ್ತಿಯಲ್ಲಿ ಜಗ್ಗಲಿಗೆ ಬಾರಿಸಿದ ರಾಹುಲ್‌, ಸಿದ್ದರಾಮಯ್ಯ

ಸವದತ್ತಿ: ಮುಂಬೈ– ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಕೊನೆ ದಿನ ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗ್ಗಲಿಗೆ ಬಾರಿಸಿದ್ದಾರೆ.

ಇಂದು ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ರಾಹುಲ್ ಹಾಗೂ ಸಿದ್ದರಾಮಯ್ಯ ಅವರು ಜಗ್ಗಲಿಗೆ ಬಾರಿಸಿದರು. ಸಿದ್ದರಾಮಯ್ಯ ಅವರು ಜಗ್ಗಲಿಗೆ ಬಾರಿಸುತ್ತಲೇ ಹೆಜ್ಜೆ ಹಾಕಿದ ದೃಶ್ಯ ವಿಡಿಯೊದಲ್ಲಿದೆ. ಈ ವಿಡಿಯೊವನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಇಬ್ಬರೂ ನಾಯಕರು ಜಗ್ಗಲಿಗೆ ಬಾರಿಸುತ್ತಿದ್ದರೆ ಸೇರಿದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.

ಯಾತ್ರೆ, ಪ್ರವಾಸ ವೇಳೆ ತಮ್ಮ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿಕೊಳ್ಳುವ ರಾಹುಲ್, ಇಂದು ರಾಮದುರ್ಗದಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆದಿರುವ ಬೆಳೆ, ಪಡೆದಿರುವ ಸಾಲ, ಆದಾಯದ ಬಗ್ಗೆಯೂ ಮಾಹಿತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry