ಶ್ರೀದೇವಿ ಆಕಸ್ಮಿಕವಾಗಿ ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿ ಸಾವು; ದೇಹದಲ್ಲಿ ಮದ್ಯದ ಅಂಶ ಪತ್ತೆ

7

ಶ್ರೀದೇವಿ ಆಕಸ್ಮಿಕವಾಗಿ ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿ ಸಾವು; ದೇಹದಲ್ಲಿ ಮದ್ಯದ ಅಂಶ ಪತ್ತೆ

Published:
Updated:
ಶ್ರೀದೇವಿ ಆಕಸ್ಮಿಕವಾಗಿ ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿ ಸಾವು; ದೇಹದಲ್ಲಿ ಮದ್ಯದ ಅಂಶ ಪತ್ತೆ

ದುಬೈ: ದುಬೈನಲ್ಲಿ ಶನಿವಾರ ರಾತ್ರಿ ನಿಧನರಾದ ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ(54) ಅವರು ಶ್ರೀದೇವಿ ಆಕಸ್ಮಿಕವಾಗಿ ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಈ ಕುರಿತು ಗಲ್ಫ್‌ ನ್ಯೂಸ್‌ ವರದಿ ಮಾಡಿದ್ದು, ಭಾರತದ ನಟಿ ಶ್ರೀದೇವಿ ಅವರು ಆಕಸ್ಮಿಕವಾಗಿ ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶ್ರೀದೇವಿ ಅವರ ದೇಹದಲ್ಲಿನ ರಕ್ತದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಬಿಡುಗಡೆ ಮಾಡಿರುವ ವರದಿಯ ಪ್ರತಿಯನ್ನು ಟ್ವೀಟ್‌ ಮಾಡಿದೆ.

ಶ್ರೀದೇವಿ ಅವರು ಮದ್ಯದ ಪ್ರಭಾವದಿಂದಾಗಿ ಸಮತೋಲನ ಕಳೆದುಕೊಂಡು ಸ್ನಾನದ ಕೋಣೆಯ ಟಬ್‌ನಲ್ಲಿ ಮುಳುಗಿದ್ದಾರೆ ಎಂದು ವರದಿಯಲ್ಲಿ ಹೇಳಿದ್ದಾಗಿ ಮತ್ತೊಂದು ಟ್ವೀಟ್‌ ಮಾಡಿದೆ.

ದುಬೈ ಪೊಲೀಸರು ಈ ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್‌ಗೆ ವರ್ಗಾಯಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಿಯಮಿತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮತ್ತೊಂದು ಟ್ವೀಟ್‌ ಮಾಡಿದೆ.

ಹತ್ತಿರದ ಸಂಬಂಧಿ ಮೊಹಿತ್‌ ಮಾರ್ವಾ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ಅವರು ಬುಧವಾರ ದುಬೈಗೆ ಶ್ರೀದೇವಿ ತೆರಳಿದ್ದರು. ಹೋಟೆಲ್‌ನ ಸ್ನಾನಗೃಹದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

* ಇವನ್ನೂ ಓದಿ...

* ಸಹಜ ಸಾವಿಗೂ ಜಟಿಲ ನಿಯಮ ಪಾಲನೆ

* ಮರೆಯಾದ ಬಾಲಿವುಡ್‌ ‘ಚಾಂದನಿ’

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry