ದುಲ್ಕರ್‌–ಅನುಷ್ಕಾ ಡುಯೆಟ್‌?

7

ದುಲ್ಕರ್‌–ಅನುಷ್ಕಾ ಡುಯೆಟ್‌?

Published:
Updated:
ದುಲ್ಕರ್‌–ಅನುಷ್ಕಾ ಡುಯೆಟ್‌?

ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತೆರೆಕಾಣಲಿರುವ ‘ಮಹಾನತಿ’ಗಾಗಿ ಕಾಯುತ್ತಿರುವ ಚಿತ್ರಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಈ ಚಿತ್ರದಲ್ಲಿ ‘ಭಾಗಮತಿ’ ಸುಂದರಿ ಅನುಷ್ಕಾ ಶೆಟ್ಟಿ ಅವರು ವಿಶೇಷ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ.

ದುಲ್ಕರ್‌ ಸಲ್ಮಾನ್‌ ಮತ್ತು ಅನುಷ್ಕಾ ಶೆಟ್ಟಿ ಅವರಿಗಾಗಿ ಒಂದು ವಿಶಿಷ್ಟ ಸನ್ನಿವೇಶವನ್ನು ಚಿತ್ರಕತೆಯಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ವಿಜಯ್ ದೇವರಕೊಂಡ, ಸಮಂತಾ, ಪ್ರಕಾಶ್‌ ರಾಜ್‌ ಮತ್ತು ಶಾಲಿನಿ ದೇಶಪಾಂಡೆ ಪ್ರಮುಖ ಪಾತ್ರಗಣದಲ್ಲಿದ್ದು ಅನುಷ್ಕಾ ಪ್ರವೇಶದಿಂದ ‘ಮಹಾನತಿ’ಯ ತಾರಾ ವರ್ಚಸ್ಸು ಇನ್ನಷ್ಟು ಹೆಚ್ಚಲಿದೆ.

ಈಗಾಗಲೇ ‘ಕಾರವಾನ್‌’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ದುಲ್ಕರ್‌, ‘ಮಹಾನತಿ’ ಮುಗಿಯುತ್ತಿದ್ದಂತೆ ಬಾಲಿವುಡ್‌ನ ಎರಡನೇ ಚಿತ್ರ ‘ಜೋಯಾ ಫ್ಯಾಕ್ಟರ್‌’ಗಾಗಿ ಬಣ್ಣ ಹಚ್ಚಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry