ಮೋದಿ ದೇಹದಲ್ಲಿ ವ್ಯಾಪಾರಿ ರಕ್ತ; ರಾಹುಲ್ ದೇಹದಲ್ಲಿ ಇಂದಿರಾ, ರಾಜೀವ್, ನೆಹರೂ ರಕ್ತ ಹರಿಯುತ್ತಿದೆ: ಸಿ.ಎಂ.ಇಬ್ರಾಹಿಂ

7

ಮೋದಿ ದೇಹದಲ್ಲಿ ವ್ಯಾಪಾರಿ ರಕ್ತ; ರಾಹುಲ್ ದೇಹದಲ್ಲಿ ಇಂದಿರಾ, ರಾಜೀವ್, ನೆಹರೂ ರಕ್ತ ಹರಿಯುತ್ತಿದೆ: ಸಿ.ಎಂ.ಇಬ್ರಾಹಿಂ

Published:
Updated:
ಮೋದಿ ದೇಹದಲ್ಲಿ ವ್ಯಾಪಾರಿ ರಕ್ತ; ರಾಹುಲ್ ದೇಹದಲ್ಲಿ ಇಂದಿರಾ, ರಾಜೀವ್, ನೆಹರೂ ರಕ್ತ ಹರಿಯುತ್ತಿದೆ: ಸಿ.ಎಂ.ಇಬ್ರಾಹಿಂ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ದೇಹದಲ್ಲಿ ಹರಿಯುತ್ತಿರುವುದು ವ್ಯಾಪಾರಿ ರಕ್ತ. ಆದರೆ, ರಾಹುಲ್ ಗಾಂಧಿ ದೇಹದಲ್ಲಿ ಹರಿಯುತ್ತಿರುವುದು ದೇಶಕ್ಕಾಗಿ ಪ್ರಾಣಕೊಟ್ಟ ಇಂದಿರಾ, ರಾಜೀವ್ ಗಾಂಧಿ ಮತ್ತು ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ರಕ್ತ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಸೋಮವಾರ ಅವರು ಮಾತನಾಡಿದರು.

ಪ್ರಥಮ ಬಾರಿಗೆ ಬಹುರಾಷ್ಟ್ರೀಯ ಪ್ರಧಾನಿ ದೇಶಕ್ಕೆ ಸಿಕ್ಕಿದ್ದಾರೆ. ತಿಂಗಳಲ್ಲಿ 20 ದಿನ ವಿದೇಶದಲ್ಲೇ ಇರುತ್ತಾರೆ. ಸಂಕಷ್ಟದಲ್ಲಿರುವ ದೇಶದ ರೈತರ ಹೊಲಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಅವರು ಆಪಾದಿಸಿದರು.

ಮೋದಿ ಪ್ರಧಾನಿಯಾದ ಬಳಿಕ ಇಬ್ಬರು ಜ್ಯೂನಿಯರ್ ಮೋದಿ ಹುಟ್ಟಿಕೊಂಡಿದ್ದಾರೆ. ಒಬ್ಬ ನೀರವ್‌ ಮೋದಿ, ಇನ್ನೊಬ್ಬ ಲಲಿತ್ ಮೋದಿ.

ಮೋದಿ ಅವರೇ, ಬಂಡವಾಳಶಾಹಿಗಳ ಪರವಾದ ನಿಮ್ಮ ಅಚ್ಛೇ ದಿನಕ್ಕಿಂತ ಕಾಂಗ್ರೆಸ್‌ನ ಕೆಟ್ಟ ದಿನಗಳು ಚನ್ನಾಗಿದ್ದವು ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry