ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಪರಿಶೀಲನೆಯ ವಿಡಿಯೊ ಚಿತ್ರೀಕರಣ

ಮೊದಲ ಬಾರಿಗೆ ಚುನಾವಣಾ ಆಯೋಗ ಕ್ರಮ
Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಳಕೆಯಾಗಲಿರುವ ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ಮೊದಲ ಹಂತದ ಪರಿಶೀಲನೆ ಕಾರ್ಯದ ಸಂಪೂರ್ಣ ವಿಡಿಯೊ ಚಿತ್ರೀಕರಣ ಮತ್ತು ವೆಬ್‌ಕಾಸ್ಟಿಂಗ್‌ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

‘ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತವಾಗಬಾರದು ಎಂಬ ಕಾರಣದಿಂದ ಇದೇ ಮೊದಲ ಬಾರಿ ಈ ಕ್ರಮಕ್ಕೆ ಆಯೋಗ ಮುಂದಾಗಿದ್ದು, ಆಸಕ್ತರು ಆಯೋಗದ ವೆಬ್‌ಸೈಟ್‌ನಲ್ಲಿ ಈ ಪ್ರಕ್ರಿಯೆಯನ್ನು ವೀಕ್ಷಿಸಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ್‌ ತಿಳಿಸಿದರು.

ಮತಯಂತ್ರ (ಬಿ.ಯು), ನಿಯಂತ್ರಣ ಯಂತ್ರ (ಸಿ.ಯು) ಮತ್ತು ಖಾತರಿ ಯಂತ್ರಗಳ (ವಿವಿ ಪ್ಯಾಟ್‌– ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಕಾರ್ಯವೈಖರಿಯನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಯಬೇಕಾಗಿದೆ. ವಿವಿಧ ರಾಜ್ಯಗಳಿಂದ ಜಿಲ್ಲೆಗಳಿಗೆ ಈಗಾಗಲೇ ಈ ಮತಯಂತ್ರಗಳು ಬಂದಿದ್ದು, ಬಿ.ಇ.ಎಲ್‌. ಎಂಜಿನಿಯರ್‌ಗಳಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಅಣಕು ಮತ: ‘ಪೂರೈಕೆಯಾದ ಮತಯಂತ್ರಗಳ ಪೈಕಿ ಶೇ 1ರಷ್ಟು ಯಂತ್ರಗಳಲ್ಲಿ 1,200 ಮತ, ಶೇ 2ರಷ್ಟು ಯಂತ್ರಗಳಲ್ಲಿ 1,000 ಮತ ಹಾಗೂ ಮತ್ತೆ ಶೇ 2ರಷ್ಟು ಯಂತ್ರಗಳಲ್ಲಿ 500 ಅಣಕು ಮತಗಳನ್ನು ನಮೂದಿಸಿ, ಅವುಗಳ ಮುದ್ರಿತ ಪ್ರತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರದರ್ಶಿಸಲಾಗುವುದು. ಯಂತ್ರಗಳ ಮತ ಖಾತರಿ ಸಾಮರ್ಥ್ಯದ ಕುರಿತು ಯಾವುದೇ ಅನುಮಾನ ಇರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲು ಆಯೋಗ ಸೂಚಿಸಿದೆ’ ಎಂದು ಸೋಮಶೇಖರ್‌ ತಿಳಿಸಿದರು.

ಪರಿಶೀಲನೆ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಅಣಕು ಮತದಾನಕ್ಕೆ ಯಂತ್ರಗಳನ್ನು ಆಯ್ಕೆ ಮಾಡಲಿದ್ದಾರೆ ಎಂದರು.

ಅಗ್ನಿಶಾಮಕ ಅಲಾರಾಂ ಅಳವಡಿಕೆ

ಲೋಹ ಶೋಧಕ ಯಂತ್ರ

24 ಗಂಟೆ ಭದ್ರತೆ

ಪ್ರತಿ ಸಿಬ್ಬಂದಿಗೂ ಗುರುತಿನ ಚೀಟಿ

2 ಮೊಬೈಲ್‌ ಫೋನ್‌ಗೆ ಮಾತ್ರ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT