ಫ್ರಾನ್ಸೆಸ್‌ ಟಿಫೊಗೆ ಪ್ರಶಸ್ತಿ

7

ಫ್ರಾನ್ಸೆಸ್‌ ಟಿಫೊಗೆ ಪ್ರಶಸ್ತಿ

Published:
Updated:
ಫ್ರಾನ್ಸೆಸ್‌ ಟಿಫೊಗೆ ಪ್ರಶಸ್ತಿ

ಫ್ಲೊರಿಡಾ: ಅಮೆರಿಕದ ಆಟಗಾರ ಫ್ರಾನ್ಸೆಸ್‌ ಟಿಫೊ ಭಾನುವಾರ ಇಲ್ಲಿ ಕೊನೆಗೊಂಡ ಡೆರ್ಲಿ ಬೀಚ್ ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಎಟಿಪಿ ಟೆನಿಸ್ ಟೂರ್ನಿಗಳಲ್ಲಿ ಟಿಫೊ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಇಲ್ಲಿ ಚಾಂಪಿಯನ್ ಆದ ಅಮೆರಿಕದ ಯುವ ಆಟಗಾರ ಎನಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಟಿಫೊ 6–1, 6–4ರಲ್ಲಿ  ನೇರ ಸೆಟ್‌ಗಳಿಂದ ಜರ್ಮನಿಯ ಪೀಟರ್‌ ಗೊಜೊಯಕ್ ಅವರನ್ನು ಮಣಿಸಿದರು.

‘ಪ್ರಶಸ್ತಿ ಗೆದ್ದುಕೊಂಡಿದ್ದೇನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಕಠಿಣ ಪರಿಶ್ರಮದಿಂದಾಗಿ ನನಗೆ ಯಶಸ್ಸು ಸಿಕ್ಕಿದೆ’ ಎಂದು ಟಿಫೊ ಹೇಳಿದ್ದಾರೆ.

ಹೋದ ವಾರ ನಡೆದ ನ್ಯೂಯಾರ್ಕ್‌ ಓಪನ್‌ನಲ್ಲಿ ಅವರು ಕ್ವಾರ್ಟರ್‌ಫೈನಲ್ ತಲುಪಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಜುವಾನ್ ಮಾರ್ಟಿನ್ ಡೆಲ್‌ ಪೊಟ್ರೊಗೆ ಆಘಾತ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry