ಸಚ್‌ವರ್ತ್‌ಮನ್ ಚಾಂಪಿಯನ್‌

7

ಸಚ್‌ವರ್ತ್‌ಮನ್ ಚಾಂಪಿಯನ್‌

Published:
Updated:
ಸಚ್‌ವರ್ತ್‌ಮನ್ ಚಾಂಪಿಯನ್‌

ರಿಯೊ ಡಿ ಜನೈರೊ (ರಾಯಿಟರ್ಸ್‌): ಅರ್ಜೆಂಟೀನಾದ ಆಟಗಾರ ಡೀಗೊ ಸಚ್‌ವರ್ತ್‌ಮನ್‌ ರಿಯೊ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಎರಡನೇ ಎಟಿಪಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಸಚ್‌ವರ್ತ್‌ಮನ್‌ ಫೈನಲ್‌ ನಲ್ಲಿ 6–2, 6–3ರಲ್ಲಿ ನೇರ ಸೆಟ್‌ಗಳಿಂದ ಫರ್ನಾಂಡೊ ವರ್ಡಾಸ್ಕೊ ಅವರನ್ನು ಮಣಿಸಿದರು.

‘ತಾಳ್ಮೆಯಿಂದ ಆಡಿದೆ. ಫರ್ನಾಂಡೊ ಡಬಲ್ಸ್ ವಿಭಾಗದಲ್ಲಿಯೂ ಆಡಿದ್ದರಿಂದ ಸುಸ್ತಾಗಿದ್ದರು. ತಕ್ಕ ಪೈಪೋಟಿ ನೀಡಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಸಚ್‌ವರ್ತ್‌ಮನ್ ಹೇಳಿದ್ದಾರೆ.

‘ಈ ಋತುವಿನಲ್ಲಿ ಉತ್ತಮ ಆರಂಭ ಪಡೆದುಕೊಂಡಿರುವುದಕ್ಕೆ ಸಂತೋಷವಾಗಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry