7

ಎಟಿಪಿ ರ‍್ಯಾಂಕಿಂಗ್‌: ರಾಮ್‌ಕುಮಾರ್‌ಗೆ 133ನೇ ಸ್ಥಾನ

Published:
Updated:
ಎಟಿಪಿ ರ‍್ಯಾಂಕಿಂಗ್‌: ರಾಮ್‌ಕುಮಾರ್‌ಗೆ 133ನೇ ಸ್ಥಾನ

ನವದೆಹಲಿ: ಭಾರತದ ಟೆನಿಸ್‌ ಆಟಗಾರ ರಾಮ್‌ಕುಮಾರ್ ರಾಮನಾಥನ್‌ ಎಟಿಪಿ ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಏಳು ಸ್ಥಾನಗಳಲ್ಲಿ ಏರಿಕೆ ಕಂಡಿರುವ ಅವರು 133ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಎಟಿಪಿ ಡೆರ್ಲಿ ಬೀಚ್ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದ 23 ವರ್ಷದ ಆಟಗಾರ ಒಟ್ಟು 12 ಪಾಯಿಂಟ್ಸ್ ಗಳಿಸಿದ್ದಾರೆ.

ಭಾರತದ ಅಗ್ರ ರ‍್ಯಾಂಕಿಂಗ್ ಆಟಗಾರ ಯೂಕಿ ಭಾಂಬ್ರಿ 105ನೇ ಸ್ಥಾನಕ್ಕೆ ಕುಸಿದಿದ್ದಾರೆ. ದುಬೈ ಡ್ಯೂಟಿ ಫ್ರೀ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಅವರು ಸೋತಿದ್ದರು.

ಯುವ ಆಟಗಾರ ಸುಮಿತ್ ನಗಾಲ್‌ 220ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ಞೇಶ್ ಗುಣೇಶ್ವರನ್‌ 10 ಸ್ಥಾನಗಳಲ್ಲಿ ಏರಿಕೆ ಕಂಡು 232ನೇ ಸ್ಥಾನ ಗಳಿಸಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಭಾರತದ ಅಗ್ರಗಣ್ಯ ಆಟಗಾರರಾಗಿ ಮುಂದುವರಿದಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ಅವರು 20ನೇ ಸ್ಥಾನದಲ್ಲಿ ಇದ್ದಾರೆ.

ದಿವಿಜ್ ಶರಣ್‌ (54), ಲಿಯಾಂಡರ್ ಪೇಸ್‌ (52) ಕೂಡ ಮೂರು ಸ್ಥಾನಗಳಲ್ಲಿ ಕುಸಿದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ 250ನೇ ಸ್ಥಾನದಲ್ಲಿ ಇದ್ದಾರೆ. ಕರ್ಮನ್‌ ಕೌರ್ ಥಂಡಿ 281ನೇ ಸ್ಥಾನ ಗಳಿಸಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಮಿರ್ಜಾ 13ನೇ ಸ್ಥಾನದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry