ಸೌದಿಯಲ್ಲಿ ಹೆಚ್ಚಲಿರುವ ಉದ್ಯೋಗ ನಷ್ಟ: ಆರತಿ ಕೃಷ್ಣ

7

ಸೌದಿಯಲ್ಲಿ ಹೆಚ್ಚಲಿರುವ ಉದ್ಯೋಗ ನಷ್ಟ: ಆರತಿ ಕೃಷ್ಣ

Published:
Updated:

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದ್ದು, ಮಾರ್ಚ್‌ ಬಳಿಕ ಎಂಟು ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಾಪಾಸಾಗಲಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದ್ದಾರೆ.

ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳ ಜೊತೆ ಸೋಮ

ವಾರ ವಿಕಾಸಸೌಧದಲ್ಲಿ ಸಭೆ ನಡೆಸಿದರು.

‘ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಉದ್ಯೋಗ ನೀತಿಯಲ್ಲಿ ಬದಲಾವಣೆ ಆಗಿರುವುದರಿಂದ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಸೌದಿ ಅರೇಬಿಯಾಗೆ ಪ್ರವಾಸ ಮಾಡಿ, ಅಲ್ಲಿರುವ ಭಾರತೀಯ ಸಮಸ್ಯೆಗಳನ್ನು ಅರಿತುಕೊಂಡು ಬಂದಿದ್ದೇನೆ. ವಾಪಾಸ್‌ ಬರುವವರಿಗೆ ಬಡ್ಡಿ ರಹಿತ ಸಾಲ, ಕೈಗಾರಿಕೆ ಸ್ಥಾಪನೆಗೆ ಭೂಮಿ, ಕಾರ್ಮಿಕರಿಗೆ ವಸತಿ ನೀಡಬೇಕೆಂದು ಮನವಿ ಮಾಡಿದ್ದಾರೆ’ ಎಂದು ಹೇಳಿದರು.

ಸೌದಿಯ ಹೊಸ ನೀತಿಯಿಂದಾಗಿ ವಿವಿಧ ಉದ್ಯಮಗಳಿಗೆ ಸಮಸ್ಯೆ ಎದುರಾಗಿದೆ. ಇದರಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಲ್ಲಿನ ಸರ್ಕಾರ ಸೆಪ್ಟಂಬರ್‌ವರೆಗೆ ಅವಕಾಶ ನೀಡಿದ್ದು, ಆ ವೇಳೆಗೆ ಲಕ್ಷಾಂತರ ಮಂದಿ ವಾಪಾಸ್ ಆಗಲಿದ್ದಾರೆ. ಈವರೆಗೆ 93 ಸಾವಿರ ಭಾರತೀಯರು ವಾಪಾಸಾಗಿದ್ದು, ಅವರಲ್ಲಿ 20 ಸಾವಿರ ಕರ್ನಾಟಕದವರು ಎಂದು ಆರತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry