ಆರ್ಥಿಕ ವೃದ್ಧಿ ದರ ಶೇ 7?

7

ಆರ್ಥಿಕ ವೃದ್ಧಿ ದರ ಶೇ 7?

Published:
Updated:
ಆರ್ಥಿಕ ವೃದ್ಧಿ ದರ ಶೇ 7?

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು ಚೇತರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಡಿಸೆಂಬರ್‌ ತ್ರೈಮಾಸಿಕದಲ್ಲಿನ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 7ರಷ್ಟು ಆಗಲಿದೆ ಎಂದು ಮೋರ್ಗನ್‌ ಸ್ಟ್ಯಾನ್ಲೆ ವರದಿಯಲ್ಲಿ ಹೇಳಲಾಗಿದೆ.

ಕೃಷಿ ವಲಯದಲ್ಲಿನ ಬೆಳವಣಿಗೆ ಕುಂಠಿತಗೊಂಡಿದ್ದರೂ, ಕೈಗಾರಿಕೆ ಮತ್ತು ಸೇವಾ ವಲಯದಲ್ಲಿನ ಪ್ರಗತಿಯ ದರ ಏರಿಕೆಯಾಗಲಿದೆ ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆ ಮೋರ್ಗನ್‌ ಸ್ಟ್ಯಾನ್ಲೆ ಅಭಿಪ್ರಾಯಪಟ್ಟಿದೆ.

ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರದ ಬಗ್ಗೆ ಬುಧವಾರ ಅಧಿಕೃತ ಅಂಕಿ ಸಂಖ್ಯೆಗಳು ಪ್ರಕಟಗೊಳ್ಳಲಿವೆ.

‘ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿನ ಶೇ 6.3 ವೃದ್ಧಿಗೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ಜಿಡಿಪಿ ದರ ಶೇ 7ಕ್ಕೆ ಏರಿಕೆಯಾಗಲಿದೆ ಎಂಬುದು ನಮ್ಮ ಎಣಿಕೆಯಾಗಿದೆ’ ಎಂದು ಸಂಸ್ಥೆಯ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಈ ಅವಧಿಯಲ್ಲಿ ಕಾರ್ಪೊರೇಟ್‌ ವರಮಾನ ಕೂಡ ಸುಧಾರಣೆ ಕಾಣಲಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ದ್ವಿಚಕ್ರ ಮತ್ತು ವಾಹನಗಳ ಮಾರಾಟ ಹೆಚ್ಚಳಗೊಂಡಿದೆ.  ವಾಹನಗಳ ರಫ್ತು ವಹಿವಾಟು ಕೂಡ ಎರಡಂಕಿ ದಾಟಿದೆ. ಇದೆಲ್ಲವೂ ಜಿಡಿಪಿ ದರ ಹೆಚ್ಚಳದ ಬಗ್ಗೆ ಆಶಾವಾದ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry