ಕುಡಿದ ಮತ್ತಿನಲ್ಲಿ ಜಗಳ– ಕೊಲೆಯಲ್ಲಿ ಅಂತ್ಯ

7

ಕುಡಿದ ಮತ್ತಿನಲ್ಲಿ ಜಗಳ– ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ‍ಪೀಣ್ಯ ಸಮೀಪದ ತಿಪ್ಪೇನಹಳ್ಳಿಯಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಜಗಳವು ಸಂತೋಷ್‌ (28) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.

ದೊಡ್ಡಬಿದರಕಲ್ಲು ಸಮೀಪದ ಸುವರ್ಣನಗರದ ನಿವಾಸಿಯಾಗಿದ್ದ ಅವರು, ಕಾರು ಚಾಲಕರಾಗಿದ್ದರು. ಅವರ ಸ್ನೇಹಿತ ಬಿ.ಪಿ. ರಂಗನಾಥ್ ಎಂಬಾತ ಕೊಲೆ ಮಾಡಿರುವ ಅನುಮಾನವಿದ್ದು, ತಲೆಮರೆಸಿಕೊಂಡಿದ್ದಾನೆ.

ಸ್ನೇಹಿತರಾದ ನರೇಶ್‌, ನಾಗರಾಜು ಹಾಗೂ ರಂಗನಾಥ್‌ ಜತೆಗೆ ಸಂತೋಷ್‌, ತಿಪ್ಪೇನಹಳ್ಳಿಯ ಬಾರೊಂದಕ್ಕೆ ಭಾನುವಾರ ರಾತ್ರಿ ಹೋಗಿದ್ದರು. ಮದ್ಯ ಕುಡಿಯುತ್ತಿದ್ದ ವೇಳೆಯಲ್ಲೇ ರಂಗನಾಥ್‌ ಜಗಳ ತೆಗೆದಿದ್ದ. ಬಾರ್ ಸಿಬ್ಬಂದಿ ಜಗಳ ಬಿಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದರು. ಹೊರಬಂದ ಬಳಿಕವೂ ಜಗಳ ಮುಂದುವರಿದಿತ್ತು.

ಸಂತೋಷ್‌ ಮೇಲೆ ರಂಗನಾಥ್‌ ಹಲ್ಲೆ ನಡೆಸಿದ್ದ. ಕುಸಿದು ಬೀಳುತ್ತಿದ್ದಂತೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೀಣ್ಯ ಪೊಲೀಸರು ತಿಳಿಸಿದರು.

‘ಸ್ನೇಹಿತರಾದ ನರೇಶ್ ಹಾಗೂ ನಾಗರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ರಂಗನಾಥ್‌ ಸಿಕ್ಕ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry