ಗಗನಯಾತ್ರೆಗೆ ಉಲ್ಲಾಸದ ಉಡುಗೆ

7
ಫ್ಲಾರಿಡಾ ವಿಜ್ಞಾನಿಗಳ ಸಂಶೋಧನೆ

ಗಗನಯಾತ್ರೆಗೆ ಉಲ್ಲಾಸದ ಉಡುಗೆ

Published:
Updated:
ಗಗನಯಾತ್ರೆಗೆ ಉಲ್ಲಾಸದ ಉಡುಗೆ

ವಾಷಿಂಗ್ಟನ್‌: ಗಗನಯಾತ್ರಿಗಳಲ್ಲಿ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ, ಅದನ್ನು ಹೋಗಲಾಡಿಸಲು ಅಗತ್ಯ ಬದಲಾವಣೆಗಳನ್ನು ಸೂಚಿಸುವ ‘ಸಂತಸದಾಯಕ ಬಾಹ್ಯಾಕಾಶ ಉಡುಗೆ’ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಫ್ಲಾರಿಡಾ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದ ಸಂಶೋಧಕರು ‘ಸ್ಮಾರ್ಟ್ ಸೆನ್ಸರಿ ಸ್ಕಿನ್’ (ಎಸ್‌3) ತಂತ್ರಜ್ಞಾನ ಬಳಸಿ ಈ ಉಡುಗೆ ಅಭಿವೃದ್ಧಿಪಡಿಸಿದ್ದಾರೆ.

‘ಬಾಹ್ಯಾಕಾಶದಲ್ಲಿ ಅಗತ್ಯ ವ್ಯಾಯಾಮದ ಕೊರತೆ, ಬೆಳಕಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು, ನಿದ್ದೆಯ ಕೊರತೆಯಿಂದಾಗಿ ಗಗನಯಾತ್ರಿಗಳು ಖಿನ್ನತೆಗೆ ಒಳಗಾಗುತ್ತಾರೆ. ಎಸ್‌3 ತಂತ್ರಜ್ಞಾನವು ವೈರ್‌ಲೆಸ್‌ ಸೆನ್ಸರ್‌ಗಳನ್ನು ಒಳಗೊಂಡಿದೆ. ಇದನ್ನು ಗಗನಯಾತ್ರಿಗಳ ಬಟ್ಟೆಗೆ ಜೋಡಿಸಲಾಗುತ್ತದೆ. ಅದು ಅವರ ಮಾನಸಿಕ ಮತ್ತು ದೈಹಿಕ ಕೊರತೆಗಳನ್ನು ಗುರುತಿಸಿ, ಕೂಡಲೇ ತಿಳಿಸುತ್ತದೆ.

ಇದರಿಂದ ಗಗನಯಾತ್ರಿಗಳು ತಾವು ಇರುವ ವಾತಾವರಣವನ್ನು ಉತ್ತಮಪಡಿಸಿಕೊಂಡು, ಅದಕ್ಕೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ. ಸೆನ್ಸರ್‌ಗಳ ಸಂದೇಶ ಪಡೆದು ವೈದ್ಯರು ಸಹ ಗಗನಯಾತ್ರಿಗಳಿಗೆ ಸೂಕ್ತ ಸಲಹೆ ನೀಡಬಹುದು. ಬಾಹ್ಯಾಕಾಶ ಯೋಜನೆಗಳ ಯಶಸ್ಸಿಗೆ ಗಗನಯಾತ್ರಿಗಳ ಮಾನಸಿಕ ಆರೋಗ್ಯವೂ ಬಹಳ ಮುಖ್ಯ’ ಎಂದು ಸಂಶೋಧನಾ ತಂಡದ ಅರ್ಮಾನ್ ಸರ್ಗೊಲ್‌ಜೇ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry