ನೈಜೀರಿಯಾ: 110 ವಿದ್ಯಾರ್ಥಿನಿಯರು ನಾಪತ್ತೆ

7

ನೈಜೀರಿಯಾ: 110 ವಿದ್ಯಾರ್ಥಿನಿಯರು ನಾಪತ್ತೆ

Published:
Updated:

ಅಬುಜಾ (ಎಎಫ್‌ಪಿ): ಬೊಕೊಹರಮ್‌ ಉಗ್ರರು ಶಾಲೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿದ ಬಳಿಕ 110 ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ ಎಂದು ನೈಜಿರಿಯಾ ಸರ್ಕಾರ ಹೇಳಿದೆ.    

‘ದಾಪ್ಚಿಯ ಸರ್ಕಾರಿ ವಿಜ್ಞಾನ ಮತ್ತು ತಾಂತ್ರಿಕ ಕಾಲೇಜಿನ 110 ವಿದ್ಯಾರ್ಥಿನಿಯರು ಕಾಣೆಯಾಗಿದ್ದು ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಮಾಹಿತಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.  

‘ಸೋಮವಾರ ರಾತ್ರಿ ಭಾರಿ ಶಸ್ತ್ರಾಸ್ತ್ರದೊಂದಿಗೆ ಸೇನಾ ಧಿರಿಸಿನಲ್ಲಿದ್ದ ಹಲವರು ‘ಅಲ್ಲಾಹು ಅಕ್ಬರ್‌’ (ದೇವರು ಶ್ರೇಷ್ಠ) ಎಂದು ಕೂಗುತ್ತಿದ್ದ ವೇಳೆ ಹೆದರಿದ ವಿದ್ಯಾರ್ಥಿಗಳು ಬೋರ್ಡಿಂಗ್‌ ಶಾಲೆಯಿಂದ ಪರಾರಿಯಾಗಿದ್ದಾರೆ’ ಎಂದು ಅದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry