7

ಏಕವಚನದಲ್ಲಿ ಸಂಬೋಧಿಸಿದ ವಿದ್ಯಾರ್ಥಿಗೆ ಥಳಿತ

Published:
Updated:

ಕೆಜಿಎಫ್: ಶಾಲಾ ವಾರ್ಷಿಕೋತ್ಸವದ ನಡೆಯುವಾಗ ಏಕವಚನದಲ್ಲಿ ಸಂಬೋಧಿಸಿದ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಶಾಲೆಯ ಮುಖ್ಯಸ್ಥರೂ ಆಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ರಶೀದ್‌ ಖಾನ್‌ ಅವರ ಪುತ್ರ ರಿಲ್ಷಾದ್‌ ಖಾನ್‌ (25) ಸಾರ್ವಜನಿಕವಾಗಿ ಥಳಿಸಿದ ಪ್ರಕರಣ ಶನಿವಾರ ರಾತ್ರಿ ಆಂಡರಸನ್‌ಪೇಟೆಯಲ್ಲಿ ನಡೆದಿದೆ.

ಎಕ್ಸಲೆಂಟ್‌ ಶಾಲೆಯ ವಾರ್ಷಿಕೋತ್ಸವ ವೇಳೆ  ರಶೀದ್‌ ಖಾನ್‌ ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ನೋಡಿದ 9ನೇ ತರಗತಿ ವಿದ್ಯಾರ್ಥಿ ಶಾನ್‌ವಾಜ್‌ ಪಕ್ಕದ ವಿದ್ಯಾರ್ಥಿಗಳಿಗೆ ‘ರಶೀದ್‌ ಖಾನ್‌ ನಡೆದುಕೊಂಡು ಹೋಗುತ್ತಿದ್ದಾನೆ, ನೋಡು’ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿಸಿಕೊಂಡ, ಅಲ್ಲೇ ನಿಂತಿದ್ದ  ದಿಲ್ಷಾದ್‌ ಖಾನ್‌ , ‘ಅವರನ್ನು ಏಕ ವಚನದಲ್ಲಿ ಕರೆಯುತ್ತೀಯಾ’ ಎಂದು ವಿದ್ಯಾರ್ಥಿಗೆ ಚೆನ್ನಾಗಿ ಥಳಿಸಿದ್ದಾನೆ.

ಅಸ್ವಸ್ಥನಾದ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ರಾಬರ್ಟಸನ್‌ಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರು ದೂರು ನೀಡಿದ್ದು, ಸೋಮವಾರ ಆಂಡರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry