ಬೆಂಗಳೂರು ಸಂಸ್ಥೆಗೆ ಬರಲಿದೆ ಸೂಪರ್‌ ಕಂಪ್ಯೂಟರ್‌

7
650 ಟೆರಾಫ್ಲಾಪ್‌ ಸಾಮರ್ಥ್ಯ: ₹ 600 ಕೋಟಿ ವೆಚ್ಚ

ಬೆಂಗಳೂರು ಸಂಸ್ಥೆಗೆ ಬರಲಿದೆ ಸೂಪರ್‌ ಕಂಪ್ಯೂಟರ್‌

Published:
Updated:
ಬೆಂಗಳೂರು ಸಂಸ್ಥೆಗೆ ಬರಲಿದೆ ಸೂಪರ್‌ ಕಂಪ್ಯೂಟರ್‌

ನವದೆಹಲಿ: ಸಂಶೋಧನೆ ಆಧರಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಬೆಂಗಳೂರಿನ ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಸರ್ಚ್‌(ಜೆಎನ್‌ಸಿಎಆರ್‌) ಸಂಸ್ಥೆಗೆ ವರ್ಷಾಂತ್ಯದ ವೇಳೆಗೆ 650 ಟೆರಾಫ್ಲಾಪ್‌ ಸಾಮರ್ಥ್ಯದ ಸೂಪರ್‌ ಕಂಪ್ಯೂಟರ್‌ ಬರಲಿದೆ.

ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಮಿಷನ್‌ ಮೊದಲ ಹಂತದ ಯೋಜನೆಯ ಅಡಿ ದೇಶದ ಆರು ಪ್ರತಿಷ್ಠಿತ ಸಂಸ್ಥೆಗಳಿಗೆ ಸೂಪರ್‌ ಕಂಪ್ಯೂಟರ್‌ ನೀಡಲಾಗುತ್ತಿದೆ.

ಅಂದಾಜು ₹600 ಕೋಟಿ ವೆಚ್ಚದಲ್ಲಿ ಆರು ಸೂಪರ್‌ ಕಂಪ್ಯೂಟರ್‌ ಖರೀದಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಶೀಘ್ರದಲ್ಲಿಯೇ ಟೆಂಡರ್‌ ಕರೆಯಲಿದೆ.

ಮೂರು ಸೂಪರ್‌ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುವುದು. ಇನ್ನುಳಿದ ಮೂರನ್ನು ಸ್ಥಳೀಯವಾಗಿ ಜೋಡಣೆ ಮಾಡಲಾಗುವುದು. 2018ರ ಅಂತ್ಯದ ವೇಳೆಗೆ ಎಲ್ಲ ಆರು ಕಂಪ್ಯೂಟರ್‌ಗಳು ಸಂಸ್ಥೆಗಳನ್ನು ಸೇರಲಿವೆ ಎಂದು ಇಲಾಖೆಯ ಕಾರ್ಯದರ್ಶಿ ಅಶುತೋಶ್‌ ಶರ್ಮಾ ತಿಳಿಸಿದ್ದಾರೆ.

ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌, ಹೈದರಾಬಾದ್‌ನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ), ಪುಣೆಯ ಭಾರತೀಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಮತ್ತು ವಾರಾಣಸಿಯ ಬಿಎಚ್‌ಯು ಐಐಟಿ  650 ಟೆರಾಫ್ಲಾಪ್‌ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಪಡೆಯಲಿವೆ.

ಐಐಟಿ ಕಾನ್ಪುರ ಮತ್ತು ಐಐಟಿ ಖರಗ್‌ಪುರ ಮಾತ್ರ 1.3 ಪೆಟಾಫ್ಲಾಪ್‌ ಸಾಮರ್ಥ್ಯದ ಸೂಪರ್‌ ಕಂಪ್ಯೂಟರ್ ಹೊಂದಲಿವೆ.

ಯೋಜನೆಯ ಸುತ್ತಮುತ್ತ

*2014ರ ಫೆಬ್ರುವರಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಭಾರತೀಯ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಮಿಷನ್‌ ವಿಧ್ಯುಕ್ತವಾಗಿ ಘೋಷಿಸಿದ್ದರು.

* 1980ರಲ್ಲಿ ಭಾರತದ ಮೊದಲ ಸೂಪರ್‌ ಕಂಪ್ಯೂಟರ್‌ ‘ಪರಮ್‌’ ಅಭಿವೃದ್ಧಿಪಡಿಸಿದ್ದ ಪುಣೆಯ ಸಿಡಿಎಸಿ ಸಹಭಾಗಿತ್ವ

* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಅನುದಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry