ಭಾರತ್‌ ಮಾತಾ ಕಿ ಜೈ ಎನ್ನದವರು ಪಾಕಿಸ್ತಾನಿಗಳು: ಉ.ಪ್ರದೇಶ ಶಾಸಕ

7

ಭಾರತ್‌ ಮಾತಾ ಕಿ ಜೈ ಎನ್ನದವರು ಪಾಕಿಸ್ತಾನಿಗಳು: ಉ.ಪ್ರದೇಶ ಶಾಸಕ

Published:
Updated:

ಬಲಿಯಾ/ ಉತ್ತರಪ್ರದೇಶ: ‘ಭಾರತ್‌ ಮಾತಾ ಕಿ ಜೈ’ ಎನ್ನದವರು ಪಾಕಿಸ್ತಾನಿಗಳು ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

‘2024ರ ಹೊತ್ತಿಗೆ ಭಾರತ ಹಿಂದೂ ರಾಷ್ಟ್ರವಾಗುತ್ತದೆ’ ಎಂದು ಇದೇ ಶಾಸಕರು ಕಳೆದ ತಿಂಗಳು ಹೇಳಿದ್ದರು.

ರಾಟ್ಸಾದ್‌ನಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತ್‌ ಮಾತಾ ಕಿ ಜೈ’, ‘ವಂದೇ ಮಾತರಂ’ ಎನ್ನದವರಿಗೆ ಈ ದೇಶದಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ, ‌ಇಂಥ ಜನರು ರಾಜಕೀಯ ಪ್ರವೇಶಿಸಲು ಅವಕಾಶ ನೀಡಬಾರದು’ ಎಂದರು.

‘ತಾಯ್ನಾಡನ್ನು ತಾಯಿಯಂತೆ ಗೌರವಿಸದವರ ದೇಶಭಕ್ತಿಯ ಮೇಲೆ ಅನುಮಾನವಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry