ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀನ್ಸ್ ಚೇತರಿಕೆ; ಟೊಮೆಟೊ, ಎಲೆಕೋಸು ಯಥಾಸ್ಥಿತಿ

Last Updated 27 ಫೆಬ್ರುವರಿ 2018, 6:13 IST
ಅಕ್ಷರ ಗಾತ್ರ

ಮೈಸೂರು: ತರಕಾರಿ ಧಾರಣೆಯಲ್ಲಿ ಈ ವಾರ ಬೀನ್ಸ್‌ ದರ ಕೊಂಚ ಚೇತರಿಕೆ ಕಂಡಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇದರ ಸಗಟು ಬೆಲೆ ಕೆ.ಜಿಗೆ ₹ 22 ತಲುಪಿದೆ. ಕ್ಯಾರೆಟ್ ಬೆಲೆಯೂ ₹ 20 ಇದೆ.

ಆದರೆ, ಟೊಮೆಟೊ ಹಾಗೂ ಎಲೆಕೋಸಿನ ಬೆಲೆ ಮಾತ್ರ ಚೇತರಿಕೆ ಕಂಡಿಲ್ಲ. ಕೇರಳದಿಂದ ವರ್ತಕರು ಇಲ್ಲಿಗೆ ಬಂದು ಟೊಮೆಟೊ ಖರೀದಿಯಲ್ಲಿ ತೊಡಗಿದರೂ ಸಗಟು ಬೆಲೆ ಮಾತ್ರ ₹ 4 ದಾಟಿಲ್ಲ. 3 ಸಾವಿರ ಕ್ವಿಂಟಲ್‌ನಿಂದ 3,416 ಕ್ವಿಂಟಲ್‌ಗೆ ಆವಕ ಹೆಚ್ಚಿರುವುದರಿಂದ ಬೇಡಿಕೆ ಹೆಚ್ಚಿದರೂ ಬೆಲೆ ಹೆಚ್ಚಾಗಿಲ್ಲ ಎಂದು ಜಯಪುರದ ರೈತ ಸೋಮಸುಂದರ್ ತಿಳಿಸಿದರು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಚೇತರಿಕೆ ಕಂಡಿದೆ. ₹ 5ರಿಂದ ₹ 8ರ ವರೆಗೂ ದರ ನಿಗದಿಯಾಗಿದೆ. ಆದರೆ, ಚಿಲ್ಲರೆ ಬೆಲೆ ಕೆ.ಜಿಗೆ ₹ 10 ಮುಟ್ಟಿದೆ.

ಎಲೆಕೋಸಿನ ಬೆಲೆಯೂ ಹೀಗೆಯೇ ಇದೆ. ದಿನವೊಂದಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ 170 ಕ್ವಿಂಟಲ್‌ನಷ್ಟು ಎಲೆಕೋಸು ಮಾರುಕಟ್ಟೆಗೆ ಬರುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೇಡಿಕೆಯೂ ಸೃಷ್ಟಿಯಾಗುತ್ತಿಲ್ಲ. ಇದರಿಂದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿಲ್ಲ.

ಮೊಟ್ಟೆ ಮತ್ತೆ ಇಳಿಮುಖ: ಕೋಳಿ ಮೊಟ್ಟೆ ದರ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಕಳೆದ ವಾರ ಒಂದು ಮೊಟ್ಟೆಗೆ ರಾಷ್ಟ್ರೀಯ ಕೋಳಿಮೊಟ್ಟೆ ದರ ಸಮನ್ವಯ ಸಮಿತಿಯ ದರವು ₹ 4.08ಕ್ಕೆ ಏರಿಕೆ ಕಂಡಿತ್ತು. ಆದರೆ, ಈಗ ಮತ್ತೆ ₹ 3.90ಕ್ಕೆ ಇಳಿಕೆಯಾಗಿದೆ. ಬೆಲೆ ಚೇತರಿಕೆ ಕಾಣಲಿದೆ ಎಂಬ ಮೊಟ್ಟೆ ಉತ್ಪಾದಕರ ನಿರೀಕ್ಷೆ ಹುಸಿಯಾಗಿದೆ.

‌ಬಾಳೆಹಣ್ಣಿನ ದರದಲ್ಲಿ ಇಳಿಕೆ 
ಏಲಕ್ಕಿ ಬಾಳೆಹಣ್ಣಿನ ದರದಲ್ಲಿ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ  ₹ 50ರಿಂದ 60 ಇದೆ. ಹಾಪ್‌ಕಾಮ್ಸ್‌ನಲ್ಲಿ ಇದರ ಬೆಲೆ ₹ 46 ಇದೆ. ಪಚ್ಚಬಾಳೆಯ ದರ ₹ 26 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT