7

ಆರ್‌ಟಿಪಿಎಸ್‌ ಬ್ಯಾರೇಜ್‌ ರೈತರ ಮಿತ್ರ

Published:
Updated:
ಆರ್‌ಟಿಪಿಎಸ್‌ ಬ್ಯಾರೇಜ್‌ ರೈತರ ಮಿತ್ರ

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ವಿದ್ಯುತ್ ಉತ್ಪಾದನಾ ಘಟಕಗಳ ನಿರ್ವಹಣೆಗಾಗಿ ನೀರಿನ ಕೊರತೆ ನೀಗಿಸಲು ಗುರ್ಜಾಪುರ ಬಳಿ ನೀರಿನ ಸಂಗ್ರಹಕ್ಕಾಗಿ ಮಾಡುತ್ತಿರುವ ಬ್ಯಾರೇಜ್ ನಿರ್ಮಾಣ ದೇವಸೂಗೂರು ವಲಯ ಮಟ್ಟದ ರೈತರಿಗೆ ಆಪದ್ಭಾಂದವ ಆಗಿದೆ.

ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಸಿಗೆ ಸಮಯದಲ್ಲಿ ನೀರಿನ ಕೊರತೆ ಉಂಟಾಗಬಾರದ ಎಂಬ ಉದ್ದೇಶದಿಂದ ಗುರ್ಜಾಪುರ ಬಳಿ 0.46 ಟಿಎಂಸಿ ಅಡಿ ನೀರು ಸಂಗ್ರಹಣದ 1,170 ಮೀಟರ್ ಉದ್ದ, 5,675 ಮೀಟರ್ ಎತ್ತರದ ಬ್ಯಾರೇಜ್ ನಿರ್ಮಿಸಿ ಅದಕ್ಕೆ 194 ಗೇಟ್ ಗಳನ್ನು ಅಳವಡಿಸುವ ಯೋಜನೆ ಜನವರಿ 28, 2015 ರಂದು ಬೆಂಗಳೂರು ಮೂಲದ ರಘು ಇನ್ಫ್ರಾ ಖಾಸಗಿ ಲಿಮಿಟೆಡ್ ಕಂಪನಿ ನೀಡಲಾಗಿತ್ತು. ₹120 ಕೋಟಿ ವೆಚ್ಚದ ಕಾಮಗಾರಿ ಶೇ 90 ರಷ್ಟು ಕೆಲಸ ಮುಗಿದಿದೆ.

ಫೆ.27ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಹಕಾ ನಿರ್ದೇಶಕ ಸಿ.ವೇಣುಗೋಪಾಲ ಹೇಳಿದರು.

ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್‌ ದೇವಸೂಗೂರು ಹೋಬಳಿ ಮಟ್ಟದ ಕಾಡ್ಲೂರು, ಶಕ್ತಿನಗರ, ಡಿ.ಯದ್ಲಾಪುರ, ಗುರ್ಜಾಪುರ, ಅರಷಿಣಿಗಿ, ಕರೇಕಲ್‌, ರಂಗಪುರ ಸುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಅನುಕೂಲ ಮಾಡಿಕೊಟ್ಟಿದೆ. ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಇಲ್ಲಿನ ನಿವಾಸಿಗಳಾದ ನಾಗರೆಡ್ಡಿ ಗುರ್ಜಾಪುರ, ವಿರೇಶಸಾಹುಕಾರ ಕಾಡ್ಲೂರು ಅವರು ಸಂತಸ ವ್ಯಕ್ತಪಡಿಸಿದರು.

* * 

ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳ ನಿರ್ವಹಣೆಗೆ ನೀರು ಸಂಗ್ರಹಕ್ಕಾಗಿ ಕೃಷ್ಣಾನದಿ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ಯಾರೇಜ್‌ ನಿರ್ಮಾಣದಿಂದ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ

ವಿಶ್ವನಾಥರೆಡ್ಡಿ ಗುರ್ಜಾಪುರ

ಗ್ರಾಮ ಪಂಚಾಯಿತಿ ಕಾಡ್ಲೂರು, ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry