ಪರಪ್ಪನ ಅಗ್ರಹಾರದಲ್ಲಿ ಸೈಕೋ ಶಂಕರ್‌ ಆತ್ಮಹತ್ಯೆ

7

ಪರಪ್ಪನ ಅಗ್ರಹಾರದಲ್ಲಿ ಸೈಕೋ ಶಂಕರ್‌ ಆತ್ಮಹತ್ಯೆ

Published:
Updated:
ಪರಪ್ಪನ ಅಗ್ರಹಾರದಲ್ಲಿ ಸೈಕೋ ಶಂಕರ್‌ ಆತ್ಮಹತ್ಯೆ

ಬೆಂಗಳೂರು:  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೈಕೋ ಶಂಕರ್ ಅಲಿಯಾಸ್ ಸೈಕೋ ಜಯಶಂಕರ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಬ್ಲೇಡ್ ನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯಗೆ ಯತ್ನಿಸಿದ್ದ ಸೈಕೋ ಶಂಕರ್‌ನನ್ನು ಜೈಲು ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದರು.  ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲವು ವರ್ಷಗಳಿಂದ ಜೈಲ್ಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದ ಸೈಕೋ ಶಂಕರ್‌ ಈ ಹಿಂದೆ ಜೈಲಿನಿಂದ ಎಸ್ಕೇಪ್ ಆಗಿದ್ದ. ನಂತರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಸರಣಿ ಕೊಲೆ, ಸುಲಿಗೆ, ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದ ಸೈಕೋ ಶಂಕರ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅತ್ಯಾಚಾರ ಮಾಡುತ್ತಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry