ಮಳಖೇಡ ಉತ್ತರಾದಿ ಮಠಕ್ಕೆ ಶಾ ಭೇಟಿ

7

ಮಳಖೇಡ ಉತ್ತರಾದಿ ಮಠಕ್ಕೆ ಶಾ ಭೇಟಿ

Published:
Updated:

ಸೇಡಂ: ತಾಲ್ಲೂಕಿನ ಮಳಖೇಡದ ಉತ್ತರಾದಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೋಮವಾರ ಭೇಟಿ ನೀಡಿ ದರ್ಶನ ಪಡೆದರು.

ಲುಂಗಿ ಮತ್ತು ಟವೆಲ್ ಧರಿಸಿ ಧಾರ್ಮಿಕ ವಿಧಿವಿಧಾನದೊಂದಿಗೆ ಪೂಜೆ ನೆರವೇರಿಸಿದರು. ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ ಅವರು ಅಮಿತ್‌ ಶಾ ಅವರಿಗೆ ಮಠದ ಕುರಿತು ವಿವರಿಸಿದರು. ನಂತರ ಮಠದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಬಿಜೆಪಿ ಕಾರ್ಯಕರ್ತರು ಸಹ ಲುಂಗಿ ಮತ್ತು ಬಿಳಿಯ ಶಾಲು ಹೊದ್ದು ದರ್ಶನ ಪಡೆದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ ತೆಲ್ಕೂರ, ಕಲ್ಯಾಣಪ್ಪ ಪಾಟೀಲ, ಮುಕುಂದ ದೇಶಪಾಂಡೆ, ನಾಗರೆಡ್ಡಿ ದೇಶಮುಖ, ಗುರು ತಳಕಿನ, ಶಿವಕುಮಾರ ಪಾಟೀಲ ತೆಲ್ಕೂರ, ಶಿವಾನಂದ ಸ್ವಾಮಿ, ಸುಂದರ ಮಂಗಾ, ರಾಜು ಕಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry