ನೀರು ಬಿಡದಿದ್ದರೆ, ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ : ಎಚ್‌.ಡಿ.ರೇವಣ್ಣ

7
ಹೇಮಾವತಿ ಅಚ್ಚುಕಟ್ಟು ಪ್ರದೇಶ

ನೀರು ಬಿಡದಿದ್ದರೆ, ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ : ಎಚ್‌.ಡಿ.ರೇವಣ್ಣ

Published:
Updated:
ನೀರು ಬಿಡದಿದ್ದರೆ, ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ : ಎಚ್‌.ಡಿ.ರೇವಣ್ಣ

ಹಾಸನ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸರ್ಕಾರ ಹೇಮಾವತಿ ಜಲಾಶಯದ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡಬೇಕು’ ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಸರ್ಕಾರಕ್ಕೆ ಮಾರ್ಚ್‌ 5ರವರೆಗೆ ಗಡುವು ನೀಡುತ್ತೇವೆ. ನೀರು ಬೀಡದಿದ್ದರೆ, ನಾವೇ ಅಣೆಕಟ್ಟಿನ ಗೇಟ್‌ಗಳಿಂದ ನೀರು ಬಿಡುತ್ತೇವೆ. ನಮ್ಮ ಮೇಲೆ ಗೋಲಿಬಾರ್‌ ಮಾಡಿ, ಬಂಧಿಸಿದರು ಹೆದರಲ್ಲ’ ಎಂದು ರೇವಣ್ಣ ಎಚ್ಚರಿಸಿದರು.

‘ಜನ ಜಾನುವಾರಗಳಿಗೆ ನೀರಿನ ಸಮಸ್ಯೆ ಇದೆ. ಹಾಗಾಗಿ, ಒಂದು ವಾರದೊಳಗೆ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಸಾವಿರಾರು ಜನ ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ’ ಎಂದರು.

‘ಇವರು ರೈತರ ಅನ್ನ ಕಿತ್ತುಕೊಂಡಿದ್ದಾರೆ. ಕನಿಷ್ಟ ಕುಡಿಯುವ ನೀರಾದರೂ ಕೊಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗರಂ ಆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry