ಶ್ರೀದೇವಿ ಪಾರ್ಥಿವ ಶರೀರ ಹಸ್ತಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ ದುಬೈ ಸರ್ಕಾರ

7

ಶ್ರೀದೇವಿ ಪಾರ್ಥಿವ ಶರೀರ ಹಸ್ತಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ ದುಬೈ ಸರ್ಕಾರ

Published:
Updated:
ಶ್ರೀದೇವಿ ಪಾರ್ಥಿವ ಶರೀರ ಹಸ್ತಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ ದುಬೈ ಸರ್ಕಾರ

ದುಬೈ: ದುಬೈನಲ್ಲಿ ತಾವು ತಂಗಿದ್ದ ಹೋಟೆಲ್‌ನಲ್ಲಿಯೇ ಶನಿವಾರ ರಾತ್ರಿ ಮೃತರಾದ ಬಹುಭಾಷಾ ನಟಿ ಶ್ರೀದೇವಿ (54) ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಿ, ಭಾರತಕ್ಕೆ ಕೊಂಡೊಯ್ಯಲು ಬೇಕಿದ್ದ ಅನುಮತಿ ಪತ್ರಗಳನ್ನು ದುಬೈ ಪೊಲೀಸರು ಮಂಗಳವಾರ ನೀಡಿದ್ದಾರೆ.

ಶ್ರೀದೇವಿ ಅವರ ಮೃತ ದೇಹವನ್ನು ನೀಡಲು ದುಬೈ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೃತ ದೇಹ ಹಸ್ತಾಂತರಿಸುವ ಸಂಬಂಧ ಅಗತ್ಯವಿದ್ದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ದುಬೈನಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿ ಹಾಗೂ ಕುಟುಂಬಸ್ಥರಿಗೆ ಸ್ಥಳೀಯ ಕಾಲಮಾನ 12.45ಕ್ಕೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದಾಗಿ ‘ಗಲ್ಫ್‌ ನ್ಯೂಸ್‌’ ಟ್ವೀಟ್‌ ಮಾಡಿದೆ.

ಸೋಮವಾರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅವರ ಸಾವಿನ ರಹಸ್ಯ ಬಯಲಾಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಹೃದಯಸ್ತಂಭನದಿಂದ ಶ್ರೀದೇವಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಪ್ರಯೋಗಾಲಯದಿಂದ ಬಂದಿರುವ ವರದಿಯಂತೆ ಅವರ ಸಾವಿಗೆ ಹೃದಯಸ್ತಂಭನ ಕಾರಣ ಅಲ್ಲ. ನೀರಿನಲ್ಲಿ ಮುಳುಗಿ ಅವರು ಮೃತಪಟ್ಟಿದ್ದಾರೆ ಎಂದು ದುಬೈ ಸರ್ಕಾರ ಹೇಳಿತ್ತು.

ಹೋಟೆಲ್‌ನ ಸ್ನಾನಗೃಹದ ನೀರು ತುಂಬಿದ್ದ ಸ್ನಾನದ ತೊಟ್ಟಿಯಲ್ಲಿ (ಬಾತ್‌ ಟಬ್‌) ಆಕಸ್ಮಿಕವಾಗಿ ಮುಳುಗಿ ಅವರು ಮೃತಪಟ್ಟಿದ್ದಾರೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸೋಮವಾರ ಸ್ಪಷ್ಟಪಡಿಸಿದೆ.

‘ಅವರ ರಕ್ತದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ ಮತ್ತು ನೀರಿನಲ್ಲಿ ಮುಳುಗಿ ಸಾಯುವಾಗ ಅವರಿಗೆ ಪ್ರಜ್ಞೆ ಇರಲಿಲ್ಲ’ ಎಂದು ದುಬೈ ಸರ್ಕಾರ ಹೇಳಿದೆ.

* ಇವನ್ನೂ ಓದಿ...
ಸ್ನಾನದ ತೊಟ್ಟಿಗೆ ಬಿದ್ದು ಶ್ರೀದೇವಿ ಸಾವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry